DAKSHINA KANNADA
ಕೇರಳ ಅರಣ್ಯ ಇಲಾಖೆ ಬಿಟ್ಟ ಚಿರತೆ ಹಿಡಿಯಲು ಕರ್ನಾಟಕ ಅರಣ್ಯ ಇಲಾಖೆಯ ಬೋನು – ಜಾಂಬ್ರಿ ಪರಿಸದಲ್ಲಿ ಆತಂಕ

ಪುತ್ತೂರು ಮಾರ್ಚ್ 04: ಕಾಸರಗೋಡಿನಲ್ಲಿ ಸಿಕ್ಕ ಚಿರತೆಯನ್ನು ಕೇರಳ-ಕರ್ನಾಟಕ ಗಡಿಭಾಗ ಜಾಂಬ್ರಿಯಲ್ಲಿ ಕೇರಳದ ಅರಣ್ಯ ಇಲಾಖೆ ಸಿಬ್ಬಂದಿಗಳು ಬಿಟ್ಟು ಹೋಗಿದ್ದು. ಇದೀಗ ಈ ಪರಿಸರದ ಜನರು ಭಯದಲ್ಲಿ ದಿನಗಳೆಯುವಂತಾಗಿದೆ.
ಪುತ್ತೂರಿನ ಪಾಣಾಜೆ ಸಮೀಪದ ಜಾಂಬ್ರಿ, ಬಂಟಾಜೆ ರಕ್ಷಿತಾರಣ್ಯ ವ್ಯಾಪ್ತಿಗೆ ಬರುವ ಜಾಂಬ್ರಿ ಪ್ರದೇಶ, ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ಬೆಳ್ಳೂರು ಪರಿಸರದಲ್ಲಿ ಸೆರೆಸಿಕ್ಕ ಚಿರತೆಯನ್ನು ರಕ್ಷಣೆ ಮಾಡಿದ ಕೇರಳದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಬೋನಿನಲ್ಲಿ ರಾತ್ರೋರಾತ್ರಿ ತಂದು ಜಾಂಬ್ರಿ ಪರಿಸರದಲ್ಲಿ ಬಿಟ್ಟು ಹೋಗಿದ್ದಾರೆ.

ಇದೀಗ ಚಿರತೆ ಇರುವ ಹಿನ್ನಲೆ ಈ ಪರಿಸದ ಜನರು ಭಯದಲ್ಲಿ ದಿನಗಳೆಯುತ್ತಿದ್ದಾರೆ. ಈ ನಡುವೆ ಕರ್ನಾಟಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನಲೆ ಇದೀಗ ಚಿರತೆ ಹಿಡಿಯಲು ಜಾಂಬ್ರಿ ಪರಿಸರದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಬೋನು ಇಟ್ಟಿದೆ. ಬೋನು ಇಟ್ಟು ನಾಲ್ಕು ದಿನ ಕಳೆದರೂ ಚಿರತೆ ಪತ್ತೆಯಾಗಿಲ್ಲ. ಬೋನಿನಲ್ಲಿ ನಾಯಿ ಮರಿಗಳನ್ನು ಇಟ್ಟು ಚಿರತೆಗಾಗಿ ಕಾಯುತ್ತಿರುವ ಅರಣ್ಯ ಇಲಾಖೆ.
1 Comment