LATEST NEWS
ಕೇರಳ -ತಬ್ಬಿಕೊಂಡೆ ಜಲಪ್ರಳಯಕ್ಕೆ ತುತ್ತಾದ ತಾಯಿ ಮಗು..ದೃಶ್ಯಕಂಡು ಕಣ್ಣೀರು ಹಾಕಿದ ರಕ್ಷಣಾ ತಂಡ

ಕೇರಳ : ವಾಯುಭಾರ ಕುಸಿತದಿಂದಾಗಿ ಕೇರಳದಲ್ಲಿ ಸುರಿದ ಮಳೆ ಭಾರಿ ಅನಾಹುತವನ್ನೆ ಮಾಡಿದ್ದು ಮಳೆಯಿಂದಾಗಿ ಉಂಟಾದ ಭೂ ಕುಸಿತಕ್ಕೆ 35ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಈ ನಡುವೆ ರಕ್ಷಣಾ ಕಾರ್ಯದರಲ್ಲಿ ತೊಡಗಿರುವ ರಾಜ್ಯ ಮತ್ತು ಕೇಂದ್ರದ ತಂಡಗಳಿಗೆ ಮಳೆ ಸೃಷ್ಟಿಸಿರುವ ಭೀಕರತೆ ಗೋಚರವಾಗುತ್ತಿದೆ. ಅವಶೇಷ ತೆರವು ವೇಳೆ ಪತ್ತೆಯಾಗಿರುವ ಶವಗಳು ಮನಕಲಕುವ ಕತೆಗಳನ್ನು ಹೇಳುತ್ತಿವೆ.
ಮೂರು ಮಕ್ಕಳು ಪರಸ್ಪರ ಕೈ ಹಿಡಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿತ್ತು. ಸೋಮವಾರ ತಾಯಿ ಹಾಗೂ ಮಗುವಿನ ಶವವು ತಪ್ಪಿಕೊಂಡ ಸ್ಥಿತಿಯಲ್ಲೇ ಪತ್ತೆಯಾಗಿದೆ. ಈ ದೃಶ್ಯವನ್ನು ಕಂಡು ಖುದ್ದು ರಕ್ಷಣಾ ತಂಡಗಳೇ ಕಣ್ಣೀರು ಹಾಕಿವೆ.

ಸಂಬಂಧಿಕರ ಮದುವೆಗೆ ಬಂದಿದ್ದ ತಾಯಿ ಹಾಗೂ ಮಳೆಗೆ ಕುಸಿದ ಮನೆಯ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿರುವ ಈ ದಾರುಣ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಅವಶೇಷಗಳನ್ನು ತೆಗೆಯುವ ಸಮಯದಲ್ಲಿ ತಾಯಿ-ಮಗ ಇಬ್ಬರೂ ತಬ್ಬಿಕೊಂಡು ಮಲಗಿರುವ ಸ್ಥಿತಿಯಲ್ಲಿದ್ದರು. ಇದೇ ವೇಳೆ, ಮತ್ತೊಂದು ಮಗು ತೊಟ್ಟಿಲಿನಲ್ಲೇ ಸಾವನ್ನಪ್ಪಿರುವ ದಾರುಣ ದೃಶ್ಯ ಕಂಡುಬಂತು.
ಮೃತ ತಾಯಿ ಮಗನನ್ನು ಫೌಝಿಯಾ (28) ಮತ್ತು ಅಮೀನ್(10) ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿಯುವ ಮೊದಲು ಮನೆಯ ಒಳಗೆ ನೀರು ನುಗ್ಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಂಬಂಧಿಕರೊಬ್ಬರಿಗೆ ಇವರು ಕಳಿಸಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಇಡೀ ಮನೆ ಪ್ರವಾಹಕ್ಕೆ ಮುಳುಗಿದೆ.