Connect with us

    LATEST NEWS

    ಕೇರಳ – ಮಾವಿನ ಹಣ್ಣನ್ನು ಕದ್ದು ಸೇವೆಯಿಂದಲೇ ವಜಾಗೊಂಡ ಪೊಲೀಸ್ ಅಧಿಕಾರಿ

    ತಿರುವನಂತಪುರಂ ಎಪ್ರಿಲ್ 26 : ರಸ್ತೆ ಬದಿಯ ಹಣ್ಣಿನ ಅಂಗಡಿಯಿಂದ 10ಕೆಜಿ ಮಾವಿನ ಹಣ್ಣುಗಳನ್ನು ಕದ್ದ ಕಂಜಿರಪಲ್ಲಿ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ವಜಾಗೊಂಡಿದ್ದಾರೆ. ಸಿವಿಲ್ ಪೊಲೀಸ್ ಅಧಿಕಾರಿ ಪಿ.ವಿ.ಶಿಹಾಬ್ ಅವರನ್ನು ಇಡುಕ್ಕಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ವಜಾಗೊಳಿಸಿದ್ದಾರೆ.


    ಕಳೆದ ವರ್ಷ ಸೆಪ್ಟೆಂಬರ್ 30 ರಂದು ಈ ಘಟನೆ ನಡೆದಿತ್ತು. ಕೊಟ್ಟಾಯಂನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಇಡುಕ್ಕಿ ಎಆರ್‌ ಕ್ಯಾಂಪ್‌ನ ಅಧಿಕಾರಿ ಶಿಹಾಬ್‌ ಎಂಬವರು ಕಂಜಿರಪಲ್ಲಿ ಹಣ್ಣಿನ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕದ್ದಿದ್ದಾರೆ. ಮಾರಾಟಕ್ಕೆ ತಂದಿದ್ದ 10 ಕೆಜಿ ಮಾವಿನ ಹಣ್ಣನ್ನು ಶಿಹಾಬ್ ತೆಗೆದುಕೊಂಡು ಹೋಗಿದ್ದು, ಆ ಸಂದರ್ಭ ಪ್ರತಿ ಕೆಜಿ ಮಾವಿನ ಹಣ್ಮಿಗೆ 600 ರೂ ಇತ್ತು, ಪೊಲೀಸ್ ಅಧಿಕಾರಿಯೊಬ್ಬರು ಅಂಗಡಿಯಿಂದ ಮಾವಿನ ಹಣ್ಣನ್ನು ಕದ್ದು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯದ ಸಿಸಿಟಿವಿ ರೆಕಾರ್ಡ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಶಿಹಾಬ್ ತಲೆಮರೆಸಿಕೊಂಡಿದ್ದಾನೆ. ಅಂಗಡಿ ಮಾಲೀಕರ ದೂರಿನ ಮೇರೆಗೆ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ ಇಡುಕ್ಕಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಶಿಹಾಬ್ ಅವರನ್ನು ಅಮಾನತುಗೊಳಿಸಿದ್ದರು.

    ಬಳಿಕ ಈ ಪ್ರಕರಣ ಪೊಲೀಸ್ ಇಲಾಖೆಗೆ ಕಳಂಕ ತಂದ ಹಿನ್ನಲೆ ಪ್ರಕರಣದ ಇತ್ಯರ್ಥ ಮಾಡಲು ಪೊಲೀಸ್ ಇಲಾಖೆ ಮುಂದಾಗಿತ್ತು, ಅದರಂತೆ ಅಂಗಡಿ ಮಾಲೀಕ ಕಳ್ಳತನದ ಕೇಸ್ ನ್ನು ವಾಪಾಸ್ ಪಡೆದಿದ್ದು, ಕೋರ್ಟ್ ನಲ್ಲೂ ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿತ್ತು. ಆದರೂ ಇದು ಜನರ ಮಧ್ಯೆ ಮಾತ್ರ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿಯೇ ಪರಿಣಮಿಸಿತ್ತು. ಈ ಹಿನ್ನಲೆ ಆರೋಪಿ ಪೊಲೀಸ್ ಅಧಿಕಾರಿಯನ್ನು ಅವರನ್ನು ವಜಾಗೊಳಿಸುವಂತೆ ಎಸ್ಪಿ ಗೃಹ ಇಲಾಖೆಗೆ ಸೂಚಿಸಿದರು. ಈಗ ಮಾವಿನ ಹಣ್ಣನ್ನ ಕದ್ದ ಪೊಲೀಸ್ ಅಧಿಕಾರಿ ಸೇವೆಯಿಂದಲೇ ವಜಾಗೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *