LATEST NEWS
ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ಜೊತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ಮದುವೆ

ಜೂನ್ 15 ರಂದು ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಮದುವೆ
ಕೇರಳ ಜೂನ್ 10: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್ ಅವರ ವಿವಾಹ ಡಿವೈಎಫ್‌ಐ ನ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಸ್ ಅವರೊಂದಿಗೆ ಶೀಘ್ರವೇ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಜೂ.15ರಂದು ಕೇವಲ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ನೆರವೇರಿಸಲು ತೀರ್ಮಾನಿಸಲಾಗಿದೆ. ಇಬ್ಬರಿಗೂ ಇದು ಎರಡನೇ ವಿವಾಹ ಸಂಬಂಧ. ರಿಯಾಸ್ ಅವರು ತಮ್ಮ ಮೊದಲ ಪತ್ನಿ ಡಾ. ಸಮೀಹಾ ಅವರಿಂದ 2015ರಲ್ಲಿ ಬೇರೆಯಾಗಿದ್ದರು. ಇವರಿಗೆ ಇಬ್ಬರು ಪುತ್ರರಿದ್ದಾರೆ. ಇನ್ನು ವೀಣಾ ಅವರಿಗೆ ಒಬ್ಬ ಪುತ್ರನಿದ್ದು, ಅವರು ಕೂಡ 5 ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದರು ಎಂದು ರಾಷ್ಟ್ರೀಯ ದೈನಿಕವೊಂದು ವರದಿಮಾಡಿದೆ.

ಬೆಂಗಳೂರಿನ ಐಟಿ ಕಂಪನಿಯ ನಿರ್ದೇಶಕರಾಗಿರುವ ವೀಣಾ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ರಿಯಾಸ್ ಅವರು 2009ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.