LATEST NEWS
ತಿಂಗಳ ಪೂಜೆಗೆ ಬಾಗಿಲು ತೆರೆದ ಶಬರಿಮಲೆ ಅಯ್ಯಪ್ಪ ಸ್ವಾಮಿ- ಕೊವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಅವಕಾಶ

ಕೇರಳ ಅಗಸ್ಟ್ 17 : ಕೊರೊನಾ ಲಾಕ್ ಡೌನ್ ನಿಂದಾಗಿ ಸಂಪೂರ್ಣ ಬಂದ್ ಆಗಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಬಾಗಿಲು ತೆರೆದಿದ್ದು, ತಿಂಗಳ ಪೂಜೆ ಇಂದಿನಿಂದ ಆರಂಭವಾಗಿದೆ. ಇನ್ನು 5 ದಿನಗಳ ಕಾಲ ಪೂಜೆ ನಡೆಸಲು ದೇವಾಲಯದ ಬಾಗಿಲು ತೆರೆಯಲಾಗಿದೆ. ಭಕ್ತಾಧಿಗಳಿಗೆ ಶಬರಿಮಲೆಗೆ ಭೇಟಿಗೆ ಅವಕಾಶ ನೀಡಲಾಗಿದೆ. ಆದರೆ ಯಾರು ದೇವಾಲಯಕ್ಕೆ ಭೇಟಿ ನೀಡುತ್ತಾರೋ ಅವರ ಬಳಿ ಕೋವಿಡ್ 19 ನೆಗೆಟಿವ್ ಸರ್ಟಿಪಿಕೆಟ್ ಅಗತ್ಯವಾಗಿ ಇರಬೇಕು. ತಿಂಗಳ ಪೂಜೆ ಆಗಸ್ಟ್ 21ರ ಸಂಜೆ ಮುಗಿದ ನಂತರ ದೇವಾಲಯದ ಬಾಗಿಲು ಮುಚ್ಚಲಾಗುವುದು ಎಂದು ದೇವಸ್ವಂ ಮಂಡಳಿ ಹೇಳಿದೆ.
ಮಲಯಾಳಂ ಪಂಚಾಗದ ಮೊದಲ ತಿಂಗಳು (ಆಗಸ್ಟ್) ಚಿಂಗಾಮ್ ನಲ್ಲಿ ಅಯ್ಯಪ್ಪ ಸ್ವಾಮಿಗೆ ಐದು ದಿನಗಳ ಪೂಜೆ ನಡೆಯಲಿದೆ. ಏತನ್ಮಧ್ಯೆ ಕೋವಿಡ್ 19 ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ದೇವಸ್ವಂ ಮಂಡಳಿಗೆ ತಿಳಿಸಿದ್ದಾರೆ.
ಅಯ್ಯಪ್ಪ ದೇವಾಲಯ ಮತ್ತೆ ಓಣಂ ಪೂಜೆಗಾಗಿ ಆಗಸ್ಟ್ 29ರಿಂದ ಸೆಪ್ಟೆಂಬರ್ 2ರವರೆಗೆ ಬಾಗಿಲು ತೆರೆಯಲಿದೆ.

ನವೆಂಬರ್ 16ರಿಂದ ಭಕ್ತಾದಿಗಳಿಗೆ ಎರಡು ತಿಂಗಳ ಕಾಲ ದೇಗುಲ ತೆರೆಯಲಿದೆ. ಈ ಸಂದರ್ಭದಲ್ಲಿ ಕೋವಿಡ್ 19 ಪರೀಕ್ಷೆಯ ನೆಗೆಟಿವ್ ಸರ್ಟಿಫಿಕೆಟ್ ತರುವುದು ಕಡ್ಡಾಯ ಎಂದು ತಿರುವಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷ ಎನ್ ವಾಸು ತಿಳಿಸಿದ್ದಾರೆ.