KARNATAKA
ಪ್ರಜ್ವಲ್ ರೇವಣ್ಣ ನಂತವರನ್ನು ಬಿಟ್ಟು ನನ್ನನ್ನು ಜೈಲಿಗೆ ಹಾಕಿದ್ದಾರೆ – ಬಿಆರ್ ಎಸ್ ನಾಯಕಿ ಕವಿತಾ
ನವದೆಹಲಿ ಮೇ 07 : ದೆಹಲಿ ಮಧ್ಯ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಕವಿತಾ ಅವರಿಗೆ ಇಂದು ಕೂಡ ಜಾಮೀನು ನಿರಾಕರಿಸಲಾಗಿದೆ. ಈ ನಡುವೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಕ್ಕಿಹಾಕಿರೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ವಿದೇಶಕ್ಕೆ ಹಾರಲು ಬಿಟ್ಟು ನಮ್ಮಂತವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಕೆ. ಕವಿತಾ ಅವರು ಪ್ರತಿಕ್ರಿಯೆ ನೀಡಿದರು. ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಂತವರನ್ನು ದೇಶದಿಂದ ಆಚೆ ಹೋಗಲು ಬಿಟ್ಟು ನಮ್ಮಂತವರನ್ನ ಬಂಧಿಸಿದ್ದಾರೆ. ತನಿಖಾ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ದೇಶದ ಜನರು ಗಮನಹರಿಸಬೇಕು ಎಂದು ಕವಿತಾ(kavitha) ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ತೆಲಂಗಾಣದ BRS ಪಕ್ಷದ ನಾಯಕಿ ಕವಿತಾಗೆ ಜಾಮೀನು ನೀಡಲು ನಿರಾಕರಿಸಿದೆ. ಸಿಬಿಐ, ಇ.ಡಿ. ಕೇಸ್‌ಗಳಲ್ಲಿ ಕವಿತಾಗೆ ಮೇ 20ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೇ ಮೇ 13ರಂದು ತೆಲಂಗಾಣದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಕವಿತಾ ಅವರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
BRS MLC Kavitha said people like Prajwal Revanna leave the country and people like us are arrested
People of the country should note this pic.twitter.com/Qz7RuSJhQI
— Naveena (@TheNaveena) May 7, 2024