FILM
ಕವಿರತ್ನ ಕಾಳಿದಾಸ, ಅಂಜದ ಗಂಡು ನಿರ್ದೇಶಕ ರೇಣುಕಾ ಶರ್ಮಾ ಕರೊನಾಗೆ ಬಲಿ

ಬೆಂಗಳೂರು, ಮೇ 06: ಕರೊನಾ ವೈರಸ್ನಿಂದ ಪ್ರತಿಭಾವಂತರನ್ನೇ ಕಳೆದುಕೊಳ್ಳುವ ಮೂಲಕ ಚಿತ್ರರಂಗ ಬಡವಾಗುತ್ತಿದೆ. ಪ್ರತಿದಿನ ಒಂದಲ್ಲ ಒಂದು ಸಾವು ಚಿತ್ರರಂಗದಲ್ಲಿ ಸಂಭವಿಸುತ್ತಿದ್ದು, ಭಾರತೀಯ ಚಿತ್ರರಂಗಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಇದೀಗ ಸ್ಯಾಂಡಲ್ವುಡ್ ಅನುಭವಿ ನಿರ್ದೇಶಕರೊಬ್ಬರು ಕರೊನಾಗೆ ಬಲಿಯಾಗಿದ್ದಾರೆ.
ಕವಿರತ್ನ ಕಾಳಿದಾಸ, ಕಿಂದರಿ ಜೋಗಿ ಮತ್ತು ಅಂಜದ ಗಂಡು ಸೇರಿದಂತೆ ಮುಂತಾದ ಯಶಸ್ವಿ ಚಿತ್ರಗಳ ನಿರ್ದೇಶನ ಮಾಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಕೋವಿಡ್ಗೆ ಬಲಿಯಾಗಿದ್ದಾರೆ.

ಕರೊನಾ ಪಾಸಿಟಿವ್ ಆದ ಬೆನ್ನಲ್ಲೇ ಕುಟುಂಬಸ್ಥರು ರೇಣುಕಾ ಶರ್ಮಾರನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.