LATEST NEWS
ಬೆಳಪು – ನೀರಿನಲ್ಲಿ ಮುಳುಗಿ ಬಾಲಕ ಸಾವು

ಶಿರ್ವ ಅಕ್ಟೋಬರ್ 06: ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದ ಕೃತಕ ಕೊಳದಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಅಕ್ಟೋಬರ್ 5ರ ಗುರುವಾರ ಸಂಭವಿಸಿದೆ. ಮೃತ ಬಾಲಕನನ್ನು ಇನ್ನಂಜೆ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ, ಬೆಳಪು ವಸತಿ ಕಾಲೋನಿ ನಿವಾಸಿ ಕಸ್ತೂರಿ ಎಂಬವರ ಪುತ್ರ ವಿಶ್ವಾಸ್ ನಾಯಕ್ (11) ಎಂದು ಗುರುತಿಸಲಾಗಿದೆ.
ವಿಶ್ವಾಸ್ ತನ್ನ ನೆರೆಹೊರೆಯವರಾದ ಶಶಾಂಕ್ ಮತ್ತು ನೌಶಾದ್ ಅವರೊಂದಿಗೆ ಈಜು ಕಲಿಯಲು ಹೋಗಿದ್ದರು. ವಿಶ್ವಾಸ್ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಆತನ ಸ್ನೇಹಿತರು ಕೂಗಿಕೊಂಡಿದ್ದಾರೆ. ಸ್ಥಳೀಯರು ಮಕ್ಕಳ ಕೂಗು ಕೇಳಿ ಓಡಿ ಬಂದು ವಿಶ್ವಾಸ್ ನನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ. ಕೂಡಲೇ ಉಡುಪಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
