DAKSHINA KANNADA
ಕಾಟೇರ ಅದ್ಭುತ ಯಶಸ್ಸು, ಕುಕ್ಕೆ ದರ್ಶನ ಮಾಡಿದ ನಟಿ ಮಾಲಶ್ರೀ ಕುಟುಂಬ..!
ಕಡಬ : ಕಾಟೇರ ಯಶಸ್ಸಿನ ಬೆನ್ನಲ್ಲೇ ನಟಿ ಮಾಲಶ್ರೀ ಅವರು ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಗಳು ಆರಾಧನಾ ಅವರ ಕಾಟೇರ ಸಿನಿಮಾ ಭರ್ಜರಿ ಪ್ರದರ್ಶನ ಕಂಡು ಯಶಸ್ಸು ಪಡೆದಿದೆ. ಇದೇ ಖುಶಿಯಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ, ಮಗ ಆರ್ಯನ್ ಜೊತೆ ದೇಗುಲಕ್ಕೆ, ಬಳಿಕ ಸಂಪುಟ ನರಸಿಂಹ ಸ್ವಾಮಿ ಭೇಟಿ ಕೊಟ್ಟಿದ್ದಾರೆ. ಮಠಕ್ಕೆ ಆಗಮಿಸಿದ್ದ ಮಲಾಶ್ರೀ ಕುಟುಂಬವನ್ನು ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶಾಲು ಹೊದಿಸಿ ಆಶೀರ್ವದಿಸಿದರು.
You must be logged in to post a comment Login