DAKSHINA KANNADA
ಯಕ್ಷಗಾನ ವೀಕ್ಷಕರ ಹಸಿವು ಹಾಗೂ ದಾಹ ನೀಗಿಸಲು ಉಚಿತ ಚರುಮುರಿ ಹಾಗೂ ಲೈಮ್ ಸೋಡಾ ವಿತರಿಸಿದ ಸೇವಾಕರ್ತೃ

ಮಂಗಳೂರು ಮಾರ್ಚ್ 14 : ಕಟೀಲು ಮೇಳದ ಆಟದ ಸೇವಾಕರ್ತೃರು ಯಕ್ಷಗಾನ ನಡೆಯುತ್ತಿರುವ ವೇಳೆ ಬಂದಂತಹ ಯಕ್ಷಗಾನ ವೀಕ್ಷಕರಿಗೆ ಉಚಿತವಾಗಿ ಲಿಂಬೆ ಶರಬತ್ತು (ಲೈಮ್ ಸೋಡಾ) ಹಾಗೂ ಚರುಮುರಿ ವಿತರಿಸುವ ಮೂಲಕ ಬಿರುಬಿಸಿಲ ಬೇಗೆಯ ಈ ವಾತಾವರಣಕ್ಕೆ ಪ್ರತಿಯೊಬ್ಬರ ದಾಹ ಹಾಗೂ ಹಸಿವು ನೀಗಿಸಲು ಪಾನೀಯ ಹಾಗೂ ತಿನಿಸು ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.
ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಬಜಪೆ ನಿವಾಸಿ ದಿವಂಗತ ವೈ. ಮಂಜುನಾಥ ಆಚಾರ್ಯ ಮೇಲೆಕ್ಕಾರ್ ರವರ ಸ್ಮರಣಾರ್ಥ ಪತ್ನಿ ಶ್ರೀಮತಿ ಶಾಲಿನಿ ಎಂ. ಆಚಾರ್ಯ ಬಜಪೆ ಹಾಗೂ ಪುತ್ರ ಶ್ರೀ ಸುಧೀರ್ ಆಚಾರ್ಯ ಬಜಪೆ ದಂಪತಿ ಕಟೀಲು ಮೇಳದಿಂದ “ಕಟೀಲು ಕ್ಷೇತ್ರ ಮಹಾತ್ಮೆ” ಎಂಬ ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟ ಸೇವೆಯಾಟವನ್ನು ತಮ್ಮ ಸೇವಾ ರೂಪದಲ್ಲಿ ಆಡಿಸುತ್ತಿದ್ದಾರೆ.

ಈ ವೇಳೆ ಆಟವನ್ನು ವೀಕ್ಷಿಸಲು ಆಗಮಿಸುವ ಯಕ್ಷಪ್ರಿಯರಿಗೆ ಹಾಗೂ ಭಕ್ತರಿಗೆ ಉಚಿತವಾಗಿ ಚರುಮುರಿ ಹಾಗೂ ಲೈಮ್ ಸೋಡಾ ವಿತರಿಸುವ ಮೂಲಕ ಬಾಯಾರಿಕೆಯ ದಾಹವನ್ನು ನೀಗಿಸುತ್ತಿದ್ದಾರೆ. ಚರುಮುರಿಯನ್ನು ಪೊಳಲಿ ನಿವಾಸಿ ಹೇಮಚಂದ್ರರವರ “ಪುರಲ್ದ ಸ್ಪೆಶಲ್ ಚರುಮುರಿ” ತಂಡ ಸ್ಥಳದಲ್ಲೇ ತಯಾರಿಸಿ, ಲೈಮ್ ಸೋಡಾ ಜೊತೆ ವಿತರಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಮುಂಬೈಯಲ್ಲಿ ನ್ಯಾಶನಲ್ ಕೊರಿಯರ್ ಆಫೀಸ್ ನಲ್ಲಿ ಉದ್ಯೋಗದಲ್ಲಿರುವ ಸುಧೀರ್ ಆಚಾರ್ಯರು ಹೋಟೆಲ್ ಉದ್ಯಮವನ್ನು ಹೊಂದಿದ್ದು ಕಟೀಲು ತಾಯಿಯ ಪರಮಭಕ್ತರಾಗಿದ್ದು, ಇಂದು ಇವರ ಪಾಲಿಗೆ ಯಕ್ಷ ಸೇವೆ ಸಲ್ಲುವ ಸೌಭಾಗ್ಯ ಒದಗಿದೆ.