LATEST NEWS
ಸದ್ಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವಿಲ್ಲ
ಆನ್ ಲೈನ್ ಮೂಲಕ ಉಚಿತ ದರ್ಶನಕ್ಕೆ ಟಿಕೆಟ್ ನೀಡಲು ಸಾಪ್ಟವೇರ್ ಬಳಕೆಗೆ ನಿರ್ಧಾರ
ಮಂಗಳೂರು ಜೂ 6: ರಾಜ್ಯಸರಕಾರ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳನ್ನು ಜೂನ್ 8 ರಿಂದ ತೆರೆಯಲು ಅನುಮತಿ ನೀಡಿದ್ದರೂ ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ದರ್ಶನಕ್ಕೆ ಸದ್ಯ ಅವಕಾಶ ನೀಡದಿರಲು ಆಡಳಿತ ಮಂಡಳಿ ನಿರ್ಧರಿಸಿದೆ.
ಸದ್ಯ ದೇವಸ್ಥಾನಗಳನ್ನು ತೆರೆದರೆ ಅತೀ ಹೆಚ್ಚಿನ ಭಕ್ತಾಧಿಗಳು ಆಗಮಿಸುವ ಸಾಧ್ಯತೆ ಇದ್ದು ಜನಸಂದಣಿಯನ್ನು ಹತೋಟಿಗೆ ತರುವ ಕಷ್ಟವಾಗುವ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದೆ ಭಕ್ತಾಧಿಗಳ ದರ್ಶನಕ್ಕೆ ಟಿಕೆಟ್ ಮೂಲಕ ವ್ಯವಸ್ಥೆಗಾಗಿ ಸಾಫ್ಟ್ ವೇರ್ ಅಭಿವೃದ್ದಿಪಡಿಸಲಾಗುತ್ತಿದ್ದು, ನೂತನ ಸಾಫ್ಟ್‌ವೇರ್ ಅಭಿವೃದ್ದಿಪಡಿಸಿದ ಬಳಿಕ ದೇವಸ್ಥಾನ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಆನ್ ಲೈನ್ ನಲ್ಲಿ ದರ್ಶನಕ್ಕೆ ಉಚಿತ ಟಿಕೆಟ್ ಪಡೆಯುವ ವ್ಯವಸ್ಥೆ ಸಾಪ್ಟವೇರ್ ನ್ನು ಅಭಿವೃದ್ದಿ ಪಡಿಸಿ ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಿ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿದೆ. ಈ ಹಿನ್ನಲೆ ಹೀಗಾಗಿ ಜೂ.8ರ ಸೋಮವಾರದಂದು ದೇವಸ್ಥಾನಕ್ಕೆ ಭಕ್ತರ ಪ್ರವೇಶವಿಲ್ಲ ಎಂದು ಕಟೀಲು ದೇವಸ್ಥಾನ ಮಂಡಳಿ ತಿಳಿಸಿದೆ.