DAKSHINA KANNADA
ಕೆಎಸ್ ಆರ್ ಟಿಸಿ ಬಸ್ ಗೆ ಬೈಕ್ ಡಿಕ್ಕಿ – ಜೀವ ಕಳೆದುಕೊಂಡ ಅಹಮ್ಮದ್ ಆಶಿಕ್ ಅಕ್ಮಲ್

ಪುತ್ತೂರು ಡಿಸೆಂಬರ್ 17 : ಸರಕಾರಿ ಬಸ್ ಗೆ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಕಬಕ ಸಮೀಪದ ಕೂವೆತ್ತಿಲದಲ್ಲಿ ಶನಿವಾರ ರಾತ್ರಿ ನಡೆದಿದೆ. ಅಪಘಾತಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತರನ್ನು ಬಂಟ್ವಾಳ ಮೂಲದ ಅಹಮ್ಮದ್ ಆಶಿಕ್ ಅಕ್ಮಲ್ (18) ಎಂದು ಗುರುತಿಸಲಾಗಿದೆ. ಈತ ಅತೀ ವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದಿದ್ದು, ಮಂಗಳೂರಿನಿಂದ ಪುತ್ತೂರಿನ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಸಾಧ್ಯವಾದಷ್ಟು ಎಡಬದಿಗೆ ಹೋದರೂ ದ್ವಿಚಕ್ರ ವಾಹನ ಸವಾರ ಬಸ್ ಗೆ ಬಂದು ಡಿಕ್ಕಿ ಹೊಡೆದು, ಬಸ್ ಚಕ್ರ ದಡಿಗೆ ಸಿಲುಕಿದ್ದಾನೆ. ಬಸ್ ನಲ್ಲಿ ಹೆಚ್ಚಿನ ಜನ ಇದ್ದಕಾರಣ ಮತ್ತಷ್ಟು ಬದಿಗೆ ಹೋಗುವ ಸಾಹಸ ಮಾಡಿಲ್ಲ ಎಂಬುದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಬಸ್ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.