LATEST NEWS
ಕಾಸರಗೋಡಿನವರಿಗೆ ತೆರೆದುಕೊಂಡ ತಲಪಾಡಿ ಗಡಿ
ಪಾಸ್ ಕಿರಿಕಿರಿ ಇಲ್ಲದೆ ಸಂಚಾರಕ್ಕೆ ಅವಕಾಶ
ಮಂಗಳೂರು ಜೂನ್ 9: ಕೊನೆಗೂ ಪ್ರತಿಭಟನೆಗಳಿಗೆ ಬಗ್ಗಿದ ದಕ್ಷಿಣಕನ್ನಡ ಜಿಲ್ಲಾಡಳಿತ ಇಂದಿನಿಂದ ತಲಪಾಡಿ ಗಡಿಯಲ್ಲಿ ಯಾವುದೇ ಪಾಸ್ ಗಳ ಕಿರಿಕಿರಿ ಇಲ್ಲದೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಕೊರೊನಾ ಹಿನ್ನಲೆ ಬಂದ್ ಆಗಿದ್ದ ತಲಪಾಡಿ ಗಡಿ ಇಂದು ಮತ್ತೆ ತೆರೆದುಕೊಂಡಿದೆ. ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಕಾಸರಗೋಡು ಕೇರಳದಿಂದ ಬರುವ ವಾಹನಗಳು, ಕಾರ್ಮಿಕರು ಹಾಗೂ ಜನರಿಗೆ ಸೂಕ್ತ ವಿಚಾರಣೆ, ಟ್ರಾವೆಲ್ ಡಿಟೇಲ್ಸ್, ಸಂಚಾರಕ್ಕೆ ಕಾರಣ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಅಗತ್ಯವಿದ್ದವರಿಗಷ್ಟೇ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ಇಷ್ಟು ದಿನ ಕೆಲಸಕ್ಕೆ ತೆರಳಲಾಗದೆ ಒದ್ದಾಡುತ್ತಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಪಾಸ್ ಗಳ ಗೊಂದಲ ಇಲ್ಲದೇ ಇರುವುದರಿಂದ ಸಂಚಾರಕ್ಕೆ ಅವಕಾಶ ಸಿಕ್ಕಂತಾಗಿದೆ.ಈಗಾಗಲೇ ಕಾಸರಗೋಡಿನಲ್ಲಿ ಗಡಿ ತೆರವಿಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿತ್ತು. ನಂತರ ಪಾಸ್ ಮೂಲಕ ಮಂಗಳೂರು ಕಾಸರಗೋಡು ಸಂಚಾರಕ್ಕೆ ಅವಕಾಶ ನೀಡಿತ್ತು, ಆದರೆ ಪಾಸ್ ಕೊಡುವಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಲಾಗಿತ್ತು, ಮಂಜೇಶ್ವರದ ಬಿಜೆಪಿ ಮಂಡಲ ಪ್ರತಿಭಟನೆಯನ್ನು ನಡೆಸಿತ್ತು. ಸದ್ಯ ತಲಪಾಡಿ ಗೇಟ್ ತೆರೆಯಲಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.