LATEST NEWS
ಕಾಸರಗೋಡು – ರೈಲಿನಿಂದ ಬಿದ್ದು ಸಾವನಪ್ಪಿದ ಮಹಿಳೆ

ಕಾಸರಗೋಡು ಜನವರಿ 06 : ರೈಲಿನಿಂದ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕಾಸರಗೋಡು ಚರ್ಚ್ ಬಳಿ ನಡೆದಿದೆ. ವಯನಾಡಿನ ಕಲ್ಪಟ್ಟಾ ಮಂಜುಮಾಳ ಕಾವುಮ್ಮಂಡಂನಲ್ಲಿ ಎ.ವಿ.ಜೋಸೆಫ್ ಅವರ ಪುತ್ರಿ ಐಶ್ವರ್ಯ ಜೋಸೆಫ್ (30) ಮೃತರು. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ಮಹಿಳೆ ಪಳ್ಳಿಕ್ಕರ ಮಾಸ್ತಿಗುಡ್ಡದಲ್ಲಿ ಹಳಿಗಳ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಬೇಕಲ ಬದಿಯ ಹಳಿಯಲ್ಲಿ ವ್ಯಕ್ತಿಯೊಬ್ಬ ಬಿದ್ದಿರುವ ಬಗ್ಗೆ ಮತ್ತೊಂದು ರೈಲಿನ ಲೋಕೋ ಪೈಲಟ್ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ 10 ಗಂಟೆಗೆ ರೈಲ್ವೆ ಪೊಲೀಸರು ಮಾಹಿತಿ ನೀಡಿದ ನಂತರ ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಎಸ್ ಐ ಕೆ.ಶ್ರೀಜೇಶ್ ನೇತೃತ್ವದಲ್ಲಿ ರೈಲ್ವೆ ಹಳಿ ಮೇಲೆ ಹುಡುಕಾಟ ನಡೆಸಲಾಗಿದ್ದು, ಸ್ಥಳೀಯರ ನೆರವಿನಿಂದ ಯುವತಿ ಪತ್ತೆಯಾಗಿದ್ದಾಳೆ. ತಲೆ ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗೊಂಡಿದ್ದ ಐಶ್ವರ್ಯಾ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ.

ಯುವತಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಚೆಕ್ ಶರ್ಟ್ ಧರಿಸಿದ್ದಳು. ಸಮೀಪದಲ್ಲೇ ದೊರೆತ ಕೈಚೀಲ ಹಾಗೂ ಪರ್ಸ್ ಪರಿಶೀಲಿಸಿದಾಗ ಮೃತಳನ್ನು ಕಲ್ಪೆಟ್ಟದ ಐಶ್ವರ್ಯ ಜೋಸೆಫ್ ಎಂದು ಪೊಲೀಸರು ಗುರುತಿಸಿದ್ದಾರೆ.