LATEST NEWS
ಕೇರಳಕ್ಕಿಂತ ಕರ್ನಾಟಕದಲ್ಲಿ ಪೆಟ್ರೋಲ್ ಅಗ್ಗ…..ಗಡಿ ಪ್ರದೇಶದ ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳ ದಟ್ಟಣೆ
ಮಂಗಳೂರು ನವೆಂಬರ್ 11: ಕೇಂದ್ರ ಸರಕಾರ ತೈಲ ಬೆಲೆ ಇಳಿಕೆ ಮಾಡುತ್ತಿದ್ದಂತೆ ರಾಜ್ಯ ಸರಕಾರವೂ ಪೆಟ್ರೋಲ್ ಬೆಲೆಯನ್ನು ಇಳಿಸಿದ್ದು, ಕೇರಳದಲ್ಲಿ ಹಳೆ ದರ ಮುಂದುವರೆದ ಹಿನ್ನಲೆ ಇದೀಗ ಕರ್ನಾಟಕದ ಗಡಿ ಪ್ರದೇಶಗಳಲ್ಲಿನ ಪೆಟ್ರೋಲ್ ಬಂಕ್ ಗಳಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ (Petrol, Diesel) ಮೇಲಿನ ಅಬಕಾರಿ ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 5 ರೂ ಹಾಗೂ ಡಿಸೇಲ್ ಮೇಲಿನ ಸುಂಕವನ್ನು 10 ರೂ ಇಳಿಕೆ ಮಾಡಿತ್ತು..
ಸತತ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್(Petrol Diesel Price0 ಬೆಲೆ ಅಬಕಾರಿ ಸುಂಕ(VAT) ಕಡಿತದ ಬಳಿಕ ತಟಸ್ಥಗೊಂಡಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸುಂಕ ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿತ್ತು. ಇದರ ಬೆನ್ನಲ್ಲೇ ಬಿಜೆಪಿ(BJP) ಆಡಳಿತ ರಾಜ್ಯಗಳು ರಾಜ್ಯ ಸರ್ಕಾರ ಹಾಕಿದ್ದ ಸುಂಕ ಕಡಿತಗೊಳಿಸಿದೆ. ಪರಿಣಾಮ ದೇಶದಲ್ಲಿ ಇದೀಗ ಕರ್ನಾಟಕದಲ್ಲಿ(Karnataka) ಪೆಟ್ರೋಲ್ ಡೀಸೆಲ್ ಅಗ್ಗವಾಗಿದೆ.
ಕೇರಳ ಭಾಗದ ಬಂಕ್‌ಗಳಲ್ಲಿ ಡೀಸೆಲ್ ದರ 8.5 ರೂ ಹಾಗೂ ಪೆಟ್ರೋಲ್ ದರ 5.5 ರೂ. ವ್ಯತ್ಯಾಸ ಇರುವ ಕಾರಣ ಬಿಕೋ ಎನ್ನುತ್ತಿವೆ. ಒಂದು ವಾರದಿಂದ ಕೇರಳ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಲ್ಲದೇ ವ್ಯವಹಾರ ನಷ್ಟವಾಗಿದೆ. ತಲಪಾಡಿಯಲ್ಲಿ ಕರ್ನಾಟಕ ಭಾಗದಲ್ಲಿನ ಬಂಕ್ ಟೋಲ್ ಗೇಟ್‌ಗೂ ಮುನ್ನ ಇರುವ ಕಾರಣ ಕೇರಳ ಭಾಗದ ವಾಹನ ಚಾಲಕರು ಇಲ್ಲಿಗೆ ಬಂದು ಇಂಧನ ತುಂಬಿಸಿ ಹೋಗುತ್ತಿದ್ದಾರೆ.