Connect with us

    LATEST NEWS

    ಕುಂದಾಪುರ : ಸ್ಟುಡಿಯೋದಲ್ಲಿ ಕಳ್ಳತನ, ಕಳ್ಳನ ಕೈಚಲಕ ಸಿಸಿಕ್ಯಾಮರದಲ್ಲಿ ಸೆರೆ

    ಉಡುಪಿ, ನವೆಂಬರ್ 11: ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿ ಸ್ಟುಡಿಯೋ ಒಂದರಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು, ಕಳ್ಳನ ಕೈಚಲಕ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ.

    ಹೊಸ ಬಸ್ ನಿಲ್ದಾಣ ಬಳಿಯ ಸೈಂಟ್ ಅಂತೋನಿ ಸ್ಟುಡಿಯೋದಲ್ಲಿ ನಿನ್ನೆ ತಡರಾತ್ರಿ ಮೇಲ್ಛಾವಣಿಯ ಹೆಂಚು ಸರಿಸಿ ಒಳಗೆ ಬಂದ ಕಳ್ಳ ಸ್ಟುಡಿಯೋ ಡ್ರಾವರ್ ನಲ್ಲಿದ್ದ ನಗದು, ಪೆನ್ ಡ್ರೈವ್ ಕದ್ದು ಪರಾರಿಯಾಗಿದ್ದಾನೆ.

    ಕಳ್ಳತನ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್ ಸ್ಟುಡಿಯೋ ಬಳಿ ಪತ್ತೆಯಾಗಿದೆ. ಸ್ಟುಡಿಯೋ ದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳನದ ಕೃತ್ಯ ಸೆರೆಯಾಗಿದೆ.ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Video:

    Share Information
    Advertisement
    Click to comment

    You must be logged in to post a comment Login

    Leave a Reply