Connect with us

    LATEST NEWS

    ಕಾಸರಗೋಡು – ನಾಪತ್ತೆಯಾಗಿದ್ದ ಟೀಚರ್ ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಪತ್ತೆ – ಲವ್ ಜಿಹಾದ್ ಆರೋಪ ಮಾಡಿದ ಹಿಂದೂ ಸಂಘಟನೆಗಳು

    ಕಾಸರಗೋಡು ಮೇ 29: ದಕ್ಷಿಣಕನ್ನಡ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಶಿಕ್ಷಕಿಯೊಬ್ಬಳು ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಪತ್ತೆಯಾಗಿದ್ದು, ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ನಡೆಸಿದ್ದಾರೆ ಎಂದು ಆರೋಪಿಸಿವೆ.


    ಕಾಸರಗೋಡಿನ ಬದಿಯಡ್ಕದಲ್ಲಿ ಖಾಸಗಿ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದ ಯುವತಿ ನಾಪತ್ತೆಯಾಗಿದ್ದಳು. ಮೇ.23ರಂದು ಮನೆಯಿಂದ ಹೊರಟ ಯುವತಿ ದಿಢೀರ್ ನಾಪತ್ತೆಯಾಗಿದ್ದಳು, ಈ ಕುರಿತಂತೆ ಯುವತಿಯ ತಂದೆ ಬದಿಯಡ್ಕದಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.
    ಈ ನಡುವೆ ಯುವತಿ ಹಾಗೂ ಯುವಕನೊಬ್ಬನ ಪೋಟೋ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿ ಬೋರ್ಡ್‌ನಲ್ಲಿ ಮದುವೆ ಕುರಿತಂತೆ ನೋಟಿಸ್ ಪತ್ತೆಯಾಗಿತ್ತು.ಮೇ 27 ರಂದು ರಿಜಿಸ್ಟರ್ ಕಚೇರಿಯಲ್ಲಿ ಜೋಡಿ ಮದುವೆಯಾಗಿ ಬಳಿಕ ಬದಿಯಡ್ಕ ಠಾಣೆಗೆ ಹಾಜರಾಗಿದ್ದರು. ಬಳಿಕ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ಸ್ವ ಇಚ್ಚೆಯಿಂದ ತೆರಳಿದ್ದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

    ಆದರೆ ಹಿಂದೂ ಸಂಘಟನೆಗಳು ಕಾಸರಗೋಡು ಜಿಲ್ಲೆಯಲ್ಲಿ ಲವ್ ಜಿಹಾದ್ ಸಕ್ರಿಯವಾಗಿರೋ ಆರೋಪಿಸಿದ್ದು, ಆರ್ಥಿಕವಾಗಿ ಹಿಂದುಳಿದ ಮತ್ತು ಆಡಂಬರದ ಬದುಕಿನ ಆಮಿಷ ತೋರಿಸಿ ಹಿಂದೂ ಯುವತಿಯರನ್ನು ಲವ್ ಜಿಹಾದ್‌ನ ಜಾಲಕ್ಕೆ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿವೆ. ಮುಸ್ಲಿಂ ಲೀಗ್ ನಿಂದ ಹಿಂದೂ ಯುವತಿಯರ ಲವ್ ಜಿಹಾದ್, ಮತಾಂತರ ಕ್ಕೆ ಕುಮ್ಮಕ್ಕು ಅರೋಪ, ಅಲ್ಲದೆ ಲವ್ ಜಿಹಾದ್ ಗೆ ಬದಿಯಡ್ಕ ಪೊಲೀಸರು ಸಾಥ್ ನೀಡ್ತಿರೋದಾಗಿ ವಿಎಚ್ ಪಿ ಆಕ್ರೋಶ ವ್ಯಕ್ತಪಡಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *