LATEST NEWS
ಕಾಸರಗೋಡು – ಮಂಗಳೂರು ನಡುವೆ ಬಸ್ ಸಂಚಾರ ಪುನರಾರಂಭ
ಮಂಗಳೂರು ನವೆಂಬರ್ 16 : ಕೊರೊನಾ ಲಾಕ್ ಡೌನ್ ಹಿನ್ನಲೆ ಮಾರ್ಚ್‌ನಿಂದ ಬಂದ್ ಆಗಿದ್ದ ಕಾಸರಗೋಡು ಮಂಗಳೂರು ನಡುವೆ ಬಸ್ಸು ಸಂಚಾರ ಬರೋಬ್ಬರಿ ಎಂಟು ತಿಂಗಳ ಬಳಿಕ ಪುನರಾರಂಭವಾಗಿದೆ.
ಸೋಮವಾರದಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚಾರ ಆರಂಭಿಸಿದ್ದು, ಕರ್ನಾಟಕದ 20, ಕೇರಳದ 20 ಬಸ್ಸುಗಳು ಸಂಚಾರ ಆರಂಭ ಮಾಡಿವೆ. ಈ ಬಸ್ಸುಗಳು ಏಳು ನಿಮಿಷಗಳ ಅಂತರದಲ್ಲಿ ಸಂಚರಿಸಲಿದೆ. ಮಂದಿನ ದಿನಗಳಲ್ಲಿ ಪ್ರಯಾಣಿಕರ ಲಭ್ಯತೆ ಮೆರೆಗೆ ಮತ್ತಷ್ಟು ಬಸ್ ಗಳು ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಕೊರೊನಾ ಲಾಕ್ ಡೌನ್ ಸಂದರ್ಭ ದಕ್ಷಿಣಕನ್ನಡ ಜಿಲ್ಲಾಡಳಿತ ಕಾಸರಗೋಡು ಗಡಿ ಬಂದ್ ಮಾಡಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ನಂತರ ಲಾಕ್ ಡೌನ್ ಸಡಿಲಿಕೆ ಆರಂಭವಾಗಿ ಬಸ್ ಸಂಚಾರಕ್ಕೆ ಕೇಂದ್ರ ಸರಕಾರ ಅವಕಾಶ ನೀಡಿತ್ತು. ಆದರೆ ಈ ಸಂದರ್ಭ ಕಾಸರಗೋಡು ಜಿಲ್ಲಾಡಳಿತ ಮಾತ್ರ ವಾಹನ ಸಂಚಾರಕ್ಕೆ ನಿಯಮಗಳನ್ನು ಹಾಕಿತ್ತು. ಅದು ಕೋರ್ಟ್ ಮೆಟ್ಟಿಲೇರಿ ನಂತರ ಕೆಲವು ಷರತ್ತಗಳೊಂದಿಗೆ ಕಾಸರಗೋಡು ಗಡಿಗಳು ತೆರೆದುಕೊಂಡಿದ್ದವು. ಆದರೂ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕದ ಕೆಎಸ್ ಆರ್ ಟಿಸಿ ಬಸ್ ಗಳು ತಲಪಾಡಿಯವರೆಗೆ ಮಾತ್ರ ಚಲಿಸುತ್ತಿತ್ತು. ಇದೀಗ ಕಾಸರಗೋಡಿಗೆ ಹಾಗೂ ಕಾಸರಗೋಡಿನಿಂದ ಮಂಗಳೂರಿಗೆ ನೇರ ಬಸ್ ಸಂಚಾರ ಆರಂಭವಾಗಿದೆ.