Connect with us

    LATEST NEWS

    ದೀಪಾವಳಿಯ ವಾಹನ ಪೂಜೆಯನ್ನು ವಿಭಿನ್ನವಾಗಿ ಆಚರಿಸಿದ ರಿಕ್ಷಾ ಚಾಲಕ

    ಉಡುಪಿ ನವೆಂಬರ್ 16: ದೀಪಾವಳಿ ಸಂದರ್ಭ ವಾಹನ ಪೂಜೆಯನ್ನು ಜನರು ವಿವಿಧ ದೇವಸ್ಥಾನಗಳಿಗೆ ಕೆರಳಿ ಸಲ್ಲಿಸುತ್ತಾರೆ. ಆದರೆ ಉಡುಪಿಯಲ್ಲಿ ಒಬ್ಬ ರಿಕ್ಷಾ ಚಾಲಕ ಮಾತ್ರ ವಿಭಿನ್ನವಾಗಿ ವಾಹನ ಪೂಜೆಯನ್ನು ಮಾಡಿ ಗಮನ ಸೆಳೆದಿದ್ದಾರೆ. ವಾಹನ ಪೂಜೆಯ ಮೂಲಕ ಮನೆಯೊಳಗೆ ಕೂತು ಸುಸ್ತಾಗಿರುವ ಮಕ್ಕಳನ್ನು ಅವರ ಕರೆಯುವ ಪ್ರಯತ್ನ ಈ ರಿಕ್ಷಾ ಚಾಲಕ ಮಾಡಿದ್ದಾನೆ.


    ಮಹಾಮಾರಿ ಕೋರೋಣ ಕಾರಣದಿಂದಾಗಿ ಈ ಬಾರಿಯ ದೀಪಾವಳಿ ಸರಳವಾಗಿ ಆಚರಣೆ ಮಾಡಿದ್ದಾರೆ. ಇಲ್ಲೊಬ್ಬ ರಿಕ್ಷಾ ಚಾಲಕ ತಮ್ಮ ವಾಹನ ಪೂಜೆಯನ್ನು ವಿಭಿನ್ನವಾಗಿ ಮಾಡಿ ಮಾದರಿಯಾಗಿದ್ದಾನೆ.. ಉಡುಪಿ ಜಿಲ್ಲೆಯ ಕಟಪಾಡಿಯ ರಿಕ್ಷಾ ನಿಲ್ದಾಣದ ಜಯಕರ್ ಕುಂದರ್ ತಮ್ಮ ರಿಕ್ಷಾಕ್ಕೆ ಬೇಲೂನೂ ಕಟ್ಟಿದ್ದಾರೆ. ಇದರಿಂದ ರಿಕ್ಷದ ಅಂದವು ಹೆಚ್ಚಿದೆ. ವರ್ಷಪೂರ್ತಿ ದುಡಿಮೆ ಮಾಡುವ ಬಂಡಿ ಜಯಕರ್ ಕುಂದರ್ ಅವರ ಕುಟುಂಬದ ಆಧಾರ ಹೌದು.


    ವರ್ಷಕ್ಕೆ ಎರಡು ಬಾರಿ ತಮ್ಮ ರಿಕ್ಷಾವನ್ನು ಅಲಂಕರಿಸುತ್ತಾರೆ 1 ಕನ್ನಡ ರಾಜ್ಯೋತ್ಸವ ಸಂದರ್ಭ ಮತ್ತು ದೀಪಾವಳಿಯ ಈ ಸಂದರ್ಭವು ತಮ್ಮ ರಿಕ್ಷಾವನ್ನು ಸುಮಾರು ಆರು ವರ್ಷಗಳಿಂದ ವಿಭಿನ್ನವಾಗಿ ಸಿಂಗರಿಸಿ ತಮ್ಮ ಕುಟುಂಬಿಕರನ್ನು ತಿರುಗಾಡಿಸುತ್ತಾರೆ. ಈ ಬಾರಿ ಕೊರೊನಾದಿಂದ ಮನೆಯೊಳಗೆ ಕೂತು ಸುಸ್ತಾಗಿರುವ ಮಕ್ಕಳಿಗೆ ಸಿಂಗರಿಸಿದ್ದ ರಿಕ್ಷಾ ನೋಡುವುದೇ ಖುಷಿ.. ಕಟಪಾಡಿಯ ಬೀದಿಯಲ್ಲಿ ಓಡಾಟ ಮಾಡುವ ರಿಕ್ಷಾವನ್ನು ನೋಡುವುದೇ ಹಬ್ಬ


    ಜಯಕರ್ ಕುಂದರ್ ಕಲಾವಿದನು ಹೌದು ಈ ಬಾರಿ ಕಟಪಾಡಿಯ ಜನತೆಗೆ ದೀಪಾವಳಿ ಸಂಭ್ರಮ ಒಂದು ಕಡೆ ಇನ್ನೊಂದು ಕಡೆ ಜಯಕರ್ ಕುಂದರ್ ಜಯಕರ್ ಅವರ ಆಟೋ ನೋಡುವುದೇ ಕಣ್ಣಿಗೆ ಹಬ್ಬ ತಮ್ಮ ದುಡಿಮೆಯ ಸಂದರ್ಭದಲ್ಲಿ ಸಾಮಾಜಿಕ ಮುಖಿಯಾಗಿ ಕೆಲಸ ಮಾಡುತ್ತಾ ತುರ್ತು ಸಂದರ್ಭದಲ್ಲಿ ಸ್ಪಂದಿಸುವ ಇವರ ಮನಸ್ಸು .. ಏನೇ ಆಗಲಿ ಎಂದು ಕಟಪಾಡಿಯ ಪರಿಸರದ ಮಕ್ಕಳಿಗೆ ರಿಕ್ಷಾ ಮಾಮ ನ ರಿಕ್ಷಾ ನೋಡುವುದೇ ಖುಷಿ

    Share Information
    Advertisement
    Click to comment

    You must be logged in to post a comment Login

    Leave a Reply