LATEST NEWS
12 ಕೋಟಿಯ ಬಂಪರ್ ಲಾಟರಿ ಮಾರಿದ ದಂಪತಿಗೆ ಖುಲಾಯಿಸಿದ ಅದೃಷ್ಠ – ಕೋಟಿಯಲ್ಲಿ ಸಿಗಲಿದೆ ಕಮಿಷನ್
ಮಂಜೇಶ್ವರ ನವೆಂಬರ್ 24: ಕೇರಳ ಸರ್ಕಾರದ ಲಾಟರಿ ವಿಭಾಗವು ದೀಪಾವಳಿ ಪ್ರಯುಕ್ತ ನಡೆಸಿದ 12 ಕೋಟಿ ರೂಪಾಯಿ ಬೃಹತ್ ಮೊತ್ತದ ಬಂಪರ್ ಲಾಟರಿಯನ್ನು ಮಂಜೇಶ್ವರದಲ್ಲಿ ಖರೀದಿಸಿದ ವ್ಯಕ್ತಿಯೊಬ್ಬರಿಗೆ ಲಭಿಸಿದ್ದು, ಆ ವ್ಯಕ್ತಿ ಯಾರು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಲಾಟರಿ ಮಾರಾಟ ಮಾಡಿದ ದಂಪತಿಗೆ ಮಾತ್ರ ಭರ್ಜರಿ ಅದೃಷ್ಟ ಖುಲಾಯಿಸಿದೆ. ಪತ್ನಿ ಮಾರಾಟ ಮಾಡಿದ ಲಾಟರಿಗೆ 12 ಕೋಟಿ ಬಂದಿದ್ದರೆ ಇತ್ತ ಪತಿ ಮಾರಿದ್ದ ಲಾಟರಿಗೆ 1 ಕೋಟಿ ರೂ ಹಣ ಬಂದಿದೆ.
ಮಂಜೇಶ್ವರದ ಜೋಸೆಫ್ ಹಾಗೂ ಮೇರಿಕುಟ್ಟಿ ದಂಪತಿಗೂ ಅದೃಷ್ಟದ ಬಾಗಿಲು ತೆರೆದಿದೆ. ಜೆಸಿ 253199 ಸಂಖ್ಯೆಯ ಲಾಟರಿಗೆ 12 ಕೋಟಿ ರು. ಮೊತ್ತದ ಬಂಪರ್ ಬಹುಮಾನ ಲಭಿಸಿದೆ. ತೆರಿಗೆ ಕಡಿತಗೊಳಿಸಿ 7.56 ಕೋಟಿ ರು. ಹಣ ವಿಜೇತರಿಗೆ ಲಭಿಸಲಿದೆ. ಅಲ್ಲದೆ, ನಾಲ್ಕು ಟಿಕೆಟ್‌ಗಳಿಗೆ ತಲಾ ಒಂದು ಕೋಟಿ ರು. ಕೂಡ ಲಭಿಸಿದೆ.
ಕೇರಳದಲ್ಲಿ ಲಾಟರಿ ಮಾರಾಟ ಮಾಡುವವರಿಗೆ .ಶೇಕಡ 10 ರಷ್ಟು ಕಮಿಷನ್ ಮೊತ್ತ ನೀಡಲಾಗುತ್ತದೆ. ಅದರಂತೆ ಪತ್ನಿಗೆ 1.20 ಕೋಟಿ ರು. ಹಾಗೂ ಪತಿಗೆ 10 ಲಕ್ಷ ರು. ಸಿಗಲಿದೆ. ಹಣ ಮೂಲತಃ ಕಣ್ಣೂರಿನವರಾದ ಜೋಸೆಫ್- ಮೇರಿಕುಟ್ಟಿ ದಂಪತಿ ಅನಾರೋಗ್ಯದ ಕಾರಣದಿಂದ ಕಾಸರಗೋಡಿನ ಮಂಜೇಶ್ವರಕ್ಕೆ ಬಂದುನೆಲೆಸಿದ್ದಾರೆ. ಕಳೆದ ಐದು ವರ್ಷದಿಂದ ಲಾಟರಿ ಟಿಕೆಟ್ ಮಾರಾಟ ಮಾಡಿ ಬದುಕು ನಡೆಸುತ್ತಿದ್ದಾರೆ. ಮೊದಲ ಬಾರಿಗೆ ಅವರು ಮಾರಾಟ ಮಾಡಿದ ಟಿಕೆಟ್‌ಗೆ ಈಗ ಬಂಪರ್ ಬಹುಮಾನ ಲಭಿಸಿ ದಂಪತಿಗೂ ಭಾರೀ ಮೊತ್ತ ಲಭಿಸಿದೆ.