LATEST NEWS
ಕಾಸರಗೋಡು : ವರ್ಕಾಡಿ ಸೆಕ್ರಡ್ ಆರ್ಟ್ ಆಫ್ ಜೀಸಸ್ ಚರ್ಚ್ ಕಾಣಿಗೆ ಡಬ್ಬಿಗೆ ಕಳ್ಳರ ಕನ್ನ..!

ಕಾಸರಗೋಡು: ಕಾಸರಗೋಡಿನ ವರ್ಕಾಡಿ ಸೆಕ್ರಡ್ ಆರ್ಟ್ ಆಫ್ ಜೀಸಸ್ ಚರ್ಚ್ ನ ಕಾಣಿಕೆ ಡಬ್ಬಿಗೆ ಕಳ್ಳರು ಕನ್ನ ಹಾಕಿದ ಘಟನೆ ನಡೆದಿದೆ. ಸೋಮವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚರ್ಚ್ ಆವರದಲ್ಲಿನ ಸಿಟಿ ಟಿವಿ ದೃಶ್ಯಾವಳಿಗಳ ಪ್ರಕಾರ ಸ್ಕೂಟರ್ ನಲ್ಲಿ ಬಂದ ಕಳ್ಳನೋರ್ವ ಈ ಕೃತ್ಯ ನಡೆಸಿದ್ದು, ಚರ್ಚ್ ಮುಂಭಾಗದ ಪ್ರವೇಶ ದ್ವಾರದ ಬಳಿಯ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆಸಿದ್ದಾನೆ. ಒಡೆದ ಕಾಣಿಕೆ ಡಬ್ಬಿಯನ್ನು ಚರ್ಚ್ ಆವರಣದಲ್ಲಿ ಎಸೆದು ಕಳ್ಳ ಪರಾರಿಯಾಗಿದ್ದಾನೆ. ಮುಂಜಾನೆಯ ಬಲಿಪೂಜೆಗೆ ಆಗಮಿಸಿದ ಭಕ್ತರು ಇದನ್ನು ಗಮನಿಸಿ ಚರ್ಚ್ ಧರ್ಮ ಗುರು ಫಾ. ಬಾಸಿಲ್ ವಾಸ್ ರವರಿಗೆ ಮಾಹಿತಿ ನೀಡಿದ್ದು, ಬಳಿಕ ಚರ್ಚ್ ಪಾಲನಾ ಸಮಿತಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ ಆರಂಭಿಸಿದ್ದಾರೆ.
