National
ಕಾಸರಗೋಡು : ಬಿಜೆಪಿ ಅಭ್ಯರ್ಥಿ ಅಶ್ವಿನಿ ಫ್ಲೆಕ್ಸ್ ಬೋರ್ಡ್ ಗಳಿಗೆ ಬ್ಲೇಡ್ ಹಾಕಿದ ಕಿಡಿಗೇಡಿಗಳು..!

ಕಾಸರಗೋಡು : ಕಾಸರಗೋಡು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಎಂ.ಎಲ್ ಅವರ ಉಪ್ಪಳದಲ್ಲಿ ಹಾಕಿದ ಫ್ಲೆಕ್ಸ್ ಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.
ಚುನಾವಣೆ ಕಛೇರಿ ಉದ್ಘಾಟನೆ ಪೂರ್ವಭಾವಿ ಸ್ಥಳದಲ್ಲಿ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್ ಗೆ ದುಷ್ಕರ್ಮಿಗಳು ಬ್ಲೇಡ್ ಹೊಡೆದಿದ್ದು ಪ್ರಚಾರ ಬೋರ್ಡ್ಗಳನ್ನು ಕಿಡಿಗೇಡಿಗಳು ಹಾನಿಮಾಡಿದ್ದಾರೆ. ಬ್ಯಾನರ್ ಹರಿದು ಹಾಕಿದ ಬಗ್ಗೆ ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ವಸಂತ್ ಕುಮಾರ್ ಮಯ್ಯ, ಮಣಿಕಂಠ ರೈ, ಕಿಶೋರ್ ಭಗವತೀ ಪುತ್ರ ರವರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
