KARNATAKA
ಕರ್ನಾಟಕದ ನೂತನ CM ಸಿದ್ದರಾಮಯ್ಯ-DCM ಡಿ.ಕೆ ಶಿವಕುಮಾರ್ ಆಯ್ಕೆ: ಶನಿವಾರ ಪ್ರಮಾಣವಚನ

ನವದೆಹಲಿ, ಮೇ 18: ಕಳೆದ 5 ದಿನಗಳಿಂದ ನಡೆಯುತ್ತಿದ್ದ ಕರ್ನಾಟಕ ಸಿಎಂ ಆಯ್ಕೆ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಸಿದ್ದರಾಮಯ್ಯಗೆ 2ನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಒಲಿದುಬಂದಿದೆ.
ಬುಧವಾರ ನಡುರಾತ್ರಿ ನಡೆದ ಅಂತಿಮ ಬೆಳವಣಿಗೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸರ್ವಾನುಮತದ ನಿರ್ಣಯವನ್ನು ಪ್ರಕಟಿಸಿದ್ದಾರೆ. ಮೇ 20 ಶನಿವಾರ ಮಧ್ಯಾಹ್ನ 12.30ಕ್ಕೆ ಪದಗ್ರಹಣ ನಡೆಯಲಿದೆ.

ಈ ಬಗ್ಗೆ ಇಂದು ಅಧಿಕೃತ ಘೋಷಣೆ ನಡೆಯಲಿದೆ. ನಿನ್ನೆ ಬೆಳಗ್ಗೆಯೇ ಸಿದ್ದರಾಮಯ್ಯ ಹೆಸರು ಸಿಎಂ ಆಯ್ಕೆ ಆಗಿತ್ತು. ಆದರೆ ಡಿಕೆಶಿ ಪಟ್ಟು ಬಿಡದ ಕಾರಣ. ಮಧ್ಯರಾತ್ರಿ ವೇಳೆ ಕೆ.ಸಿ ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ನಡುವೆ ನಡೆದ ಸಂಧಾನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.