LATEST NEWS
ಮಂಗಳೂರು – ಟಿವಿ ನೋಡಲು ಬಂದ ಅಪ್ರಾಪ್ತ ಬಾಲಕಿಯ ಮೇಲೆ ಅ*ತ್ಯಾ*ಚಾ*ರ ಮಾಡಿದ್ದ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಮಂಗಳೂರು ನವೆಂಬರ್ 22 : 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ.ಗಳ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೋ) ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕಿನ ಕೆ ಸುಧೀರ್ ಎಂಬಾತನೇ ಶಿಕ್ಷೆಗೊಳಗಾದ ಆರೋಪಿ. ಡಿಸೆಂಬರ್ 2021ರಲ್ಲಿ ಆರೋಪಿ ಮನೆಗೆ ಟಿವಿ ನೋಡಲು ಬಂದ ಸಂತ್ರಸ್ತ ಬಾಲಕಿಯನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಅಜ್ಜಿಯ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ, ಬಳಿಕ ಬಾಲಕಿಯೇ ಸ್ವ ಇಚ್ಚೆಯಿಂದ ಬಂದಿದ್ದಾಳೆ ಎಂದು ಮನೆಯವರಿಗೆ ಹೇಳಿದ್ದ ಆರೋಪಿ ಬೆದರಿಕೆ ಕೂಡ ಹಾಕಿದ್ದ ಬಳಿಕ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ.
ಆಗಸ್ಟ್ 2022 ರಲ್ಲಿ, ಹುಡುಗಿ ಗರ್ಭಿಣಿಯಾಗಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಸಂತ್ರಸ್ಥೆಯ ಮನೆಯವರಿಗೆ ನಾನು ಆಕೆಯನ್ನು ಮದುವೆಯಾಗುತ್ತೇನೆ ಎಂದು ಹೇಳಿ, ಆಕೆಗೆ ಬೆಳ್ಳಿಯ ಕರಿಮಣಿ , ಕಾಲುಂಗುರ ತೊಡಿಸಿ, ಪೋಟೋ ತೆಗೆದಿದ್ದಾನೆ. ಬಳಿಕ ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ಸಂತ್ರಸ್ತ ಬಾಲಕಿಯನ್ನು ಚಿಕ್ಕಮಗಳೂರಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಸ್ಪತ್ರೆಯೊಂದರಲ್ಲಿ ಈಕೆ ನನ್ನ ಪತ್ನಿ ಎಂದು ಹೇಳಿ, ಆಕೆಯ ಗರ್ಭಪಾತ ಮಾಡಿಸಿದ್ದಾನೆ.
ಆದರೆ ಆತನ ಹಣೆಬರಹ ಸರಿ ಇರಲಿಲ್ಲ. ಯಾರೋ ಅನಾಮಧೆಯ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಸಂತ್ರಸ್ಥೆಯ ಮನೆಯವರು ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಸಂತ್ರಸ್ಥೆಯನ್ನು ಕೌನ್ಸೆಲಿಂಗ್ ಮಾಡಿದ ವೇಳೆ ನಡೆದ ಎಲ್ಲಾ ವಿಚಾರವನ್ನು ಆಕೆ ಬಾಯಿ ಬಿಟ್ಟಿದ್ದಾಳೆ. ಇದಾದ ನಂತರ, ಸುಧೀರ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಶಿವಕುಮಾರ್ ಬಿ ಮತ್ತು ಸತ್ಯನಾರಾಯಣ ಕೆ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಇದೀಗ ನ್ಯಾಯಾಲಯ ಅತ್ಯಾಚಾರಕ್ಕಾಗಿ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೊ ಕಾಯಿದೆ ಸೆಕ್ಷನ್ 6 ರ ಅಡಿಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ – 2 (ಪೋಕ್ಸೊ) ನ್ಯಾಯಾಧೀಶರಾದ ಮಾನು ಕೆಎಸ್ ಅವರು ಸುಧೀರ್‌ಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 40,000 ರೂ. ಹೆಚ್ಚುವರಿಯಾಗಿ, ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 201 ರ ಅಡಿಯಲ್ಲಿ ಅವರು ಮೂರು ವರ್ಷಗಳ ಸರಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡದ ಮೊತ್ತದಲ್ಲಿ 50 ಸಾವಿರ ರೂ.ಗಳನ್ನು ಸಂತ್ರಸ್ತೆಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಇದಲ್ಲದೆ ಐಪಿಸಿ ಸೆಕ್ಷನ್ 357(ಎ) ಮತ್ತು ಸಂತ್ರಸ್ತ ಪರಿಹಾರ ಯೋಜನೆಯಡಿ ಸಂತ್ರಸ್ತರಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ.ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆದೇಶಿಸಿ ತೀರ್ಪು ನೀಡಿದ್ದಾರೆ.