LATEST NEWS
ಬಿಜೆಪಿ ಚುನಾವಣಾ ಪ್ರಣಾಳಿಕೆಯ ಹೈಲೈಟ್ಸ್ – 1 ಲಕ್ಷದ ವರೆಗೆ ರೈತರ ಬೆಳೆ ಸಾಲ ಮನ್ನಾ

ಬಿಜೆಪಿ ಚುನಾವಣಾ ಪ್ರಣಾಳಿಕೆಯ ಹೈಲೈಟ್ಸ್ – 1 ಲಕ್ಷದ ವರೆಗೆ ರೈತರ ಬೆಳೆ ಸಾಲ ಮನ್ನಾ
ಬೆಂಗಳೂರು ಮೇ 4: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. “ನಮ್ಮ ಕರ್ನಾಟಕಕ್ಕೆ ನಮ್ಮ ವಚನ” ಘೋಷಣೆ ವಾಕ್ಯದಡಿ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು.
ಬಿಜೆಪಿ ಚುನಾವಣಾ ಪ್ರಣಾಳಿಕೆಯ ಹೈಲೈಟ್ಸ್
ಇಡೀ ರಾಜ್ಯದ ಪ್ರಮುಖ ಅಪೇಕ್ಷೆಯಂತೆ ರಾಷ್ಟ್ರೀಕೃತ ಬ್ಯಾಂಕ್ ರೈತರ ಸಾಲಮನ್ನಾ ವನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, 1 ಲಕ್ಷದ ವರೆಗೆ ರೈತರ ಬೆಳೆ ಸಾಲ. ಸಹಕಾರಿ ಸಾಲ 1 ಲಕ್ಷದ ವರೆಗೆ ಸಾಲ ಮನ್ನಾ ಇದು ಸಿಎಂ ಆದ ದಿನವೇ ಘೋಷಣೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

ಪ್ರತಿ ಮನೆಗೆ ಸೌಭಾಗ್ಯ ಯೋಜನೆಯಡಿ ವಿದ್ಯುತ್.
ಕೊಳಚೆ ಪ್ರದೇಶ ನಿರ್ಮೂಲನೆಗೆ ಯೋಜನೆ
ಬೆಂಗಳೂರನ್ನ ವಿಶ್ವದರ್ಜೆ ನಗರ ಮಾಡಲು ಕಟಿಬದ್ದ.
ಎಲ್ಲ ಬಡಾವಣೆಗಳಿಗೆ ಮೆಟ್ರೋ ವಿಸ್ತರಣೆ.
ನೇಕಾರರ ಒಂದು ಲಕ್ಷದ ವರೆಗಿನ ಸಾಲ ಮನ್ನಾ.
ಇಂದಿರಾ ಕ್ಯಾಂಟೀನ್ ಚೇಂಜ್ ಬದಲಾಗಲಿದೆ ಎಂಬ ಸೂಚನೆ ನೀಡಿದ ಯಡಿಯೂರಪ್ಪ.
ಅನ್ನಪೂರ್ಣ ಕ್ಯಾಂಟೀನ್ ನಿರ್ಮಾಣ.
ಜಿಲ್ಲಾ ಕೇಂದ್ರದಲ್ಲಿ ಎರಡು, ತಾಲೂಕಿನಲ್ಲಿ ಒಂದು ಅನ್ನಪೂರ್ಣ ಕ್ಯಾಂಟೀನ್
ಮದಕರಿ ಹೆಸರಿನಲ್ಲಿ ವಾಲ್ಮೀಕಿ ಸಮುದಾಯದ ಏಳಿಗೆಗೆ ಹಾಗೂ ವಸತಿ ಯೋಜನೆಗೆ 6500ಕೋಟಿ ರೂ. ಮೀಸಲು
ವಿವಾಹ ಮಂಗಳ ಯೋಜನೆಯಡಿ ಎರಡು ಗ್ರಾಂ ಚಿನ್ನದ ತಾಳಿ.
ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಈ ಅವಕಾಶ.
ಉದ್ಯೋಗ ಸೃಷ್ಟಿ 2000 ಕೋಟಿ.
ಪ್ರತಿ ತಾಲೂಕಿನಲ್ಲಿ ಸ್ಪೋರ್ಟ್ಸ್ ಟ್ರ್ಯಾಕ್ ನಿರ್ಮಾಣ.
ಬಿಪಿಎಲ್ ದಾರರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯ ವಿತರಣೆ
1.5ಲಕ್ಷ ಕೋಟಿ ನೀರಾವರಿಗಾಗಿ ಮೀಸಲು.
ಎಲ್ಲ ಕೆರೆಗಳ ಪುನಶ್ಚೇತನಕ್ಕೆ ಕಲ್ಯಾಣ ಯೋಜನೆ
ಪ್ರತಿನಿತ್ಯ 10ಗಂಟೆ ರೈತರಿಗೆ ವಿದ್ಯುತ್.
ಗೋ ಹತ್ಯೆ ನಿಷೇಧ ಕಾಯ್ದೆ 2012ಕ್ಕೆ ಮರು ಜೀವ.
ಗೋ ಹತ್ಯಾ ನಿಷೇಧ ನಿಗಮ ಘೋಷಣೆ.
ಸ್ತ್ರೀ ಶಕ್ತಿ ಸಂಘಗಳಿಗೆ ಶೇ.1 ಬಡ್ಡಿ ದರದಲ್ಲಿ 2 ಲಕ್ಷದ ವರೆಗೆ ಸಾಲ