Connect with us

LATEST NEWS

ರಾಜ್ಯದ ಕರಾವಳಿ ತೀರ ಸುರಕ್ಷಿತ: ಕೋಸ್ಟ್ ಗಾರ್ಡ್ ಕಮಾಂಡರ್ ಪಿ.ಕೆ.ಮಿಶ್ರಾ

ಉಡುಪಿ, ಫೆಬ್ರವರಿ 26: ರಾಜ್ಯದ ಕರಾವಳಿ ಕಾವಲು ಪಡೆಗೆ , ಮಲ್ಪೆಯ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯಲ್ಲಿ ನೀಡಿರುವ ತರಬೇತಿಯ ಕಾರ್ಯ ವಿಧಾನಗಳನ್ನು , ದೈನಂದಿನ ಕರ್ತವ್ಯದಲ್ಲಿ ಸಮರ್ಪಕವಾಗಿ ಅಳವಡಿಸಿಕೊಳ್ಳುವ ಮಾಡುವ ರಾಜ್ಯದ ಮೂಲಕ ಕರಾವಳಿ ತೀರವನ್ನು ಸುರಕ್ಷಿತವಾಗಿಡಲು ಸಾಧ್ಯವಾಗಲಿದೆ ಎಂದು ಮಂಗಳೂರು ವಿಭಗದ ಕೋಸ್ಟ್ ಗಾರ್ಡ್ನ ಡಿಐಜಿ ಕಮಾಂಡರ್ ಪಿ.ಕೆ.ಮಿಶ್ರಾ ಹೇಳಿದರು.


ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕಚೇರಿಯಲ್ಲಿ ನಡೆದ, ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ,ಮೊದಲ ತಂಡದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಮುದ್ರದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸೂಕ್ತ ರೀತಿಯ ಸಂವಹನ ಹಾಗೂ ಕಾರ್ಯಚರಣೆ ಕುರಿತ ಸ್ಪಷ್ಟ ಮಾಹಿತಿಗಳು ಎಲ್ಲಾ ಸಿಬ್ಬಂದಿಗಳಿಗೂ ಇರಬೇಕು, ಕೌಶಲ್ಯದಿಂದ ಕೂಡಿದ ಕಾರ್ಯವಿಧಾನವನ್ನು ಅಳವಡಿಸಿಕೊಂಡು , ಕರ್ತವ್ಯ ಸಂದರ್ಭದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬೇಕು , ಸಿಬ್ಬಂದಿಗಳಿಗೆ ಇನ್ನೂ ಹೆಚ್ಚಿನ ತರಬೇತಿಯ ಅಗತ್ಯವಿದಲ್ಲಿ ಕೋಸ್ಟ್ ಗಾರ್ಡ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

 

Advertisement
Click to comment

You must be logged in to post a comment Login

Leave a Reply