Connect with us

UDUPI

ಸಾಲಿಗ್ರಾಮದ ಕರ್ನಾಟಕ ಬ್ಯಾಂಕ್ ಸೀಲ್ ಡೌನ್

ಉಡುಪಿ ಜುಲೈ 14: ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕರ್ನಾಟಕ ಬ್ಯಾಂಕ್ ನ ಸಿಬ್ಬಂದಿಗೆ ಕೊರೊನಾ ಸೊಂಕು ದೃಢಪಟ್ಟ ಹಿನ್ನಲೆ ಬ್ಯಾಂಕ್ ಹಾಗೂ ಎಟಿಎಂ ಕೇಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ.


ಕರ್ನಾಟಕ ಬ್ಯಾಂಕ್ ನ ಸಿಬ್ಬಂದಿಯೊಬ್ಬರಿಗೆ ಕಳೆದ ಒಂದು ವಾರದಿಂದ ಅನಾರೋಗ್ಯವಿದ್ದು ಕೊರೊನಾ ಪರೀಕ್ಷೆಗೆ ಒಳಗಾಗಿ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. ಇಂದು ಅವರ ಕೊವಿಡ್ ವರದಿ ಬಂದಿದ್ದು, ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಈ ಹಿನ್ನಲೆ ಬ್ಯಾಂಕ್ ಹಾಗೂ ಪಕ್ಕದಲ್ಲಿನ ಎಟಿಎಂ ಕೇಂದ್ರವನ್ನು ಕಂಟೋನ್ಮೆಂಟ್ ಝೋನ್ ಗೊಳಿಸಿ ಶೀಲ್ ಡೌನ್ ಮಾಡಲಾಗಿದೆ. ಮುಂದಿನ ಎರಡು-ಮೂರು ದಿನಗಳ ಕಾಲ ಬ್ಯಾಂಕ್ ನ ಎಲ್ಲ ವ್ಯವಹಾರಗಳು ಸ್ಥಗಿತಗೊಳಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *