LATEST NEWS
ಪ್ರಚೋದನಕಾರಿ ಭಾಷಣ – ಬಜರಂಗದಳ ನಾಯಕ ಪುನೀತ್ ಅತ್ತಾವರ ಮೇಲೆ ಕೇಸ್
ಉಡುಪಿ ಅಗಸ್ಟ್ 16: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಜರಂಗದಳ ಮಂಗಳೂರು ವಿಭಾಗ ಸಹ ಸಂಚಾಲಕ ಪುನೀತ್ ಅತ್ತಾವರ ಹಾಗೂ ಕಾರ್ಕಳ ನಗರ ಸಂಚಾಲಕ ಸಂಪತ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ನಗರದಲ್ಲಿ ಅಗಸ್ಟ್ 13ರಂದು ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಇಬ್ಬರು ಮುಖಂಡರು ಒಂದು ಕೋಮಿನ ವಿರುದ್ಧ ಪ್ರಚೋದನಾಕಾರಿಯಾಗಿ ಮಾತನಾಡಿದ್ದರಿಂದ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
You must be logged in to post a comment Login