Connect with us

    KARNATAKA

    ಕಾರ್ಕಳ : ಪೊಲೀಸರ ಸಮ್ಮುಖದಲ್ಲೇ ‘ಸಿಪಿಐ ಮಾವೋವಾದಿ ಜಿಂದಾಬಾದ್’ ಘೋಷಣೆ ಕೂಗಿದ ನಕ್ಸಲ್ ಹೋರಾಟಗಾರ್ತಿ ಶ್ರೀಮತಿ..!

    ಕಾರ್ಕಳದ ಘನನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿ  ನಕ್ಸಲ್ ಹೋರಾಟಗಾರ್ತಿ ಶ್ರೀಮತಿ ಸಿಪಿಐ ಮಾವೋವಾದಿ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾಳೆ.

    ಕಾರ್ಕಳ : 2011 ಡಿಸೆಂಬರ್ 19 ರಂದು ಪೊಲೀಸ್ ಮಾಹಿತಿದಾರ ಮಲೆಕುಡಿಯ ಜನಾಂಗದ ಸದಾಶಿವ ಗೌಡನ ಅಪಹರಣ, ಹತ್ಯೆ ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ಪೊಲೀಸರು ಕಾರ್ಕಳಕ್ಕೆ ಕರೆತಂದಿದ್ದರು.

    ಗುರುವಾರ ಕಾರ್ಕಳದ ಘನನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿ  ನಕ್ಸಲ್ ಹೋರಾಟಗಾರ್ತಿ ಶ್ರೀಮತಿ ಸಿಪಿಐ ಮಾವೋವಾದಿ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾಳೆ. ಬುಧವಾರ ದಂದು ಮೊಟ್ಟಮೊದಲಾಗಿ ಶ್ರೀಮತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರಾದರೂ 2011ರ ನ. 19ರಂದು ಹೆಬ್ರಿಯ ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಸದಾಶಿವ ಗೌಡರನ್ನು ಅಪಹರಿಸಿ, ಕೊಲೆಗೈದ ತಂಡದಲ್ಲಿ ಶ್ರೀಮತಿ ಆರೋಪಿಯಾಗಿದ್ದಳು. ನಂತರದ ದಿನಗಳಲ್ಲಿ ನಕ್ಸಲ್ ತಂಡದೊಂದಿಗೆ‌ ಸಕ್ರಿಯಾಗೊಂಡಿದ್ದ ಆಕೆ ವಿವಿದೆಡೆಗಳಲ್ಲಿ ಪ್ರಚಾರ ಕಾರ್ಯ ಹಾಗೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಪಶ್ಚಿಮಘಟ್ಟ ತಪ್ಪಲು ಹಾಗೂ ಅದರ ಅಸುಪಾಸುಗಳಲ್ಲಿ ವರ್ಷ ಕಳೆಯುತ್ತಿದ್ದಂತೆ‌ ನಕ್ಸಲ್ ಚಳುವಳಿ ಕ್ಷೀಣಿಸಿಕೊಂಡಿದ್ದು, ಚಳುವಳಿಗೆ ಬೆಂಬಲಿಸಿದವರು ಮುಖ್ಯವಾಹಿನಿಗೆ‌ ಸೇರಿರುವ ಹಿನ್ನಲೆಯಲ್ಲಿ‌ ಆಕೆ ಸಹಿತ ಆನೇಕ ನಕ್ಸಲ್ ಹೋರಾಟಗಾರರು ತಲೆ ಮರೆಸಿಕೊಂಡರು.ಕರ್ನಾಟಕ, ಕೇರಳ, ತಮಿಳುನಾಡು ಗಡಿಭಾಗದಲ್ಲಿ ಸಕ್ರಿಯಾ ವಾಗಿ ಚಳುವಳಿಯನ್ನು ಆರಂಭಿಸಿದ ತ್ರಿರಾಜ್ಯ ದ ನಕ್ಸಲ್ ಮುಖಂಡರು ಅದೇ ಪ್ರದೇಶವನ್ನು ತಮ್ಮ ಕೇಂದ್ರತಾಣವಾಗಿ ಮಾರ್ಪಡು ಮಾಡಿದರು.2023 ನವಂಬರ್ 23ರಂದು ಶ್ರೀಮತಿ ಹಾಗೂ ಇತರರು ಕೇರಳ ಪೊಲೀಸರ ಬಂಧನದಲ್ಲಿ ಇದ್ದು, ಜೈಲು ಸೇರಿದ್ದರು. ಫೆ.‌13ರ ರಾತ್ರಿ ಡಿವೈಎಸ್‌ಪಿ ಅರವಿಂದ್ ಎನ್. ಕಲಗುಜ್ಜಿ ಅವರ ನೇತೃತ್ವದ ತಂಡ ಶ್ರೀಮತಿಯನ್ನು ಕೇರಳದಿಂದ ಬಿಗುಪೊಲೀಸ್ ಪಹರೆಯೊಂದಿಗೆ‌ ಕಾರ್ಕಳ ಕರೆದುಕೊಂಡು ಬಂದಿದ್ದರು.ವಿಚಾರಣೆ ಪೂರ್ಣಗೊಂಡ ಬಳಿಕ ಮತ್ತೇ ನ್ಯಾಯಾಲಯಕ್ಕೆ ಶ್ರೀಮತಿಯನ್ನು ಪೊಲೀಸರು ಹಾಜರು ಪಡಿಸಿದ್ದರು. ಆರೋಪಿ ಶ್ರೀಮತಿಗೆ ಭದ್ರತೆಯ ದೃಷ್ಟಿಯಿಂದ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿ ಅದೇಶವನ್ನು ನ್ಯಾಯಧೀಶರು ಹೊರಡಿಸಿದ್ದಾರೆ.ಶ್ರೀಮತಿ ಮೇಲೆ ರಾಜ್ಯದ ಹಲವು ಠಾಣೆಗಳಲ್ಲಿ 9 ಪ್ರಕರಣಗಳಿವೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *