Connect with us

LATEST NEWS

ಕಾರ್ಕಳ ಹಿಂದೂ ಯುವತಿ ಮೇಲಿನ ಅತ್ಯಾಚಾರಕ್ಕೆ ಶಾಸಕ ಸುನೀಲ್ ಕುಮಾರ್ ಖಂಡನೆ

ಕಾರ್ಕಳ : ಹಿಂದೂ ಯುವತಿ ಮೇಲಿನ ಪೈಶಾಚಿಕ ಕೃತ್ಯವನ್ನು ಕಾರ್ಕಳ(karkala)  ಶಾಸಕ ಸುನೀಲ್ ಕುಮಾರ್ ಖಂಡಿಸಿದ್ದಾರೆ.  ಬಡ ಯುವತಿಯೋರ್ವಳಿಗೆ ಮತ್ತು ಬರಿಸುವಂತ ಅಮಲು ಪದಾರ್ಥ ನೀಡಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಖಂಡನೀಯ.

ಇದೊಂದು ಪೈಶಾಚಿಕ ಕೃತ್ಯ ಎಂದ ಅವರು ಘಟನೆಯನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಯುವತಿಯನ್ನು ಪುಸಲಾಯಿಸಿ ಅಮಲು ಪದಾರ್ಥದೊಂದಿಗೆ ಕಾರಿನಲ್ಲಿ ಸುಮಾರು ದೂರ ಪಳ್ಳಿ ತನಕ ಕರೆದೊಯ್ದು ಕೃತ್ಯ ನಡೆಸಿದ್ದಾರೆ ಎಂದರೆ ಇದನ್ನು ಊಹಿಸಲು ಅಸಾಧ್ಯ. ಇದೊಂದು ಪೂರ್ವಯೋಜಿತ ಕೃತ್ಯ ಎನ್ನುವ ಸಂದೇಹ ದಟ್ಟವಾಗಿ ಕಾಣುತ್ತದೆ. ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು. ಈ ಮೂಲಕ ಪ್ರಕರಣ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಭೇದಿಸಬೇಕು. ಈ ಹಿಂದೆಯೂ ಇಂತಹ ಕೃತ್ಯ ಎಸಗಿರುವ ಸಾಧ್ಯತೆ ದೃಷ್ಟಿಯಿಂದಲೂ ಸೂಕ್ತ ತನಿಖೆಯಾಗಬೇಕು. ಸಂತ್ರಸ್ತ ಯುವತಿಯ ಆರೋಗ್ಯ ವೆಚ್ಚವನ್ನು ಸರಕಾರ ಭರಿಸಬೇಕು. ಜಿಲ್ಲಾಡಳಿತ ಯುವತಿಗೆ ಮಾನಸಿಕ ಧೈರ್ಯ ತುಂಬಿ, ಯುವತಿ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದವರು ಆಗ್ರಹಿಸಿದ್ದಾರೆ.

 

Share Information
Continue Reading
Advertisement
1 Comment

1 Comment

  1. Pingback: ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ ಗ್ಯಾಂಗ್ ರೇಪ್ , ಇಬ್ಬರ ಬಂಧನ..! - themangaloremirror.in

Leave a Reply

Your email address will not be published. Required fields are marked *