LATEST NEWS
ಕಾರ್ಕಳ: ನಿಂತಿದ್ದ ಟೆಂಪೋ ಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ
ಕಾರ್ಕಳ ಜನವರಿ 23: ನಿಂತಿದ್ದ ಟೆಂಪೋಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಸಾಣೂರು ರಾಮ ಮಂದಿರ ಬಳಿ ನಡೆದಿದೆ.
ಚಿಕ್ಕೋಡಿ ಡಿಪೊಗೆ ವಿಭಾಗದ ಬಸ್ ಬೆಳಗಾವಿ ಕಡೆಯಿಂದ ಧರ್ಮಸ್ಥಳ ಕಡೆಗೆ ಸಾಗುತ್ತಿದ್ದಾಗ ಸಾಣೂರು ರಾಮ ಮಂದಿರದ ಬಳಿ ನಿಂತಿದ್ದ ಟೆಂಪೊಗೆ ಡಿಕ್ಕಿ ಹೊಡೆದಿದೆ.
ಅಪಘಾತ ಪರಿಣಾಮ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಹಲವು ಪ್ರಯಾಣಿಕರು ಮತ್ತು ಚಾಲಕ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
Continue Reading