LATEST NEWS
ಅವೈಜ್ಞಾನಿಕ ಚರಂಡಿ ಕಾಮಗಾರಿ – ಹೊಂಡಕ್ಕೆ ಬಿದ್ದ ಬೈಕ್ ಸವಾರ ಗಂಭೀರ

ಕಾರ್ಕಳ ಎಪ್ರಿಲ್ 7: ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿಗಾಗಿ ರಸ್ತೆ ಮಧ್ಯೆ ತೆಗೆದ ಹೊಂಡಕ್ಕೆ ಬೈಕ್ ಸವಾರನೊಬ್ಬ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ಮಣ್ ಮೂಡಬಿದ್ರೆ ಹೆದ್ದಾರಿಯಲ್ಲಿ ಸಚ್ಚರೀ ಪೇಟೆ ಎಂಬಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಬೋಳ ದಿನೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ಬೆಳ್ಮಣ್ ಮೂಡಬಿದ್ರೆ ಹೆದ್ದಾರಿಯಲ್ಲಿ ಸಚ್ಚರೀ ಪೇಟೆ ಸಮೀಪ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಗುತ್ತಿಗೆದಾರರು ಯಾವುದೇ ಸೂಚನಾ ಫಲಕ ಹಾಕದ ಕಾರಣ ಬೈಕ್ ಸವಾರ ಚರಂಡಿಗಾಗಿ ತೋಡಿದ ಗುಂಡಿಗೆ ಬಿದ್ದಿದ್ದಾನೆ.

ಈ ಘಟನೆಯಲ್ಲಿ ಬೈಕ್ ಸವಾರ ದಿನೇಶ್ ಅವರಿಗೆ ಗಂಭೀರಗಾಯಗಳಾಗಿದ್ದು ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರ ಇದೇ ರಸ್ತೆಯಲ್ಲಿ ಕಾರೊಂದು ಚರಂಡಿ ಕಾಮಗಾರಿ ನಿರ್ಮಾಣದ ಗುಂಡಿಗೆ ಬಿದ್ದ ಘಟನೆ ನಡೆದಿದೆ. ಇಷ್ಟಾದರೂ ಗುತ್ತಿಗೆದಾರ ಮಾತ್ರ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕ ಹಾಕದೇ ಸುಮ್ಮನೆ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.