LATEST NEWS
ಕಾರ್ಕಳ : ಮನೆ ಪಕ್ಕದಲ್ಲಿ ಇರಿಸಿದ್ದ ಬೀಗದ ಕೀ ತೆಗೆದು 33 ಪವನ್ ಚಿನ್ನ ಕದ್ದ ಆರೋಪಿ ಮಾಲು ಸಮೇತ ಬಂಧನ..!
ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯ ಮನೆಯೊಂದರ ಬೀಗ ತೆರೆದು ಚಿನ್ನ ಕಳ್ಳತನ ಮಾಡಿದ ಆರೋಪಿಯನ್ನು ಕದ್ದ ಮಾಲು ಸಮೇತ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಳ ಗ್ರಾಮದಲ್ಲಿ ವಾಸ್ತವ್ಯವಿರುವ ತಂಗಚ್ಚನ್ ಮಗ ಸಂತೋಷ್ ಟಿ. ಬಂಧಿತ ಆರೋಪಿಯಾಗಿದ್ದಾನೆ. ಆಗಸ್ಟ್ 30ರಂದು ಗುರ್ಗಾಲ್ ಗುಡ್ಡೆಯ ಮನೆ ಪಕ್ಕದಲ್ಲಿ ಇರಿಸಿದ್ದ ಕೀಯಿಂದ ಮನೆ ಬಾಗಿಲು ತೆರೆದು ಬೆಡ್ ರೂಂನ ಲಾಕರ್ ನಲ್ಲಿದ್ದ ಸುಮಾರು10,05,000 ರೂ. ಮೌಲ್ಯದ 33 ಪವನ್ ವಿವಿಧ ರೀತಿಯ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಗ್ರಾಮಾಂತರ ಠಾಣಾ ಪಿಎಸ್‌ಐ ದಿಲೀಪ್ ಜಿ. ಆರ್., ತನಿಖಾ ವಿಭಾಗದ ಪಿ.ಎಸ್.ಐ. ಸುಂದರ ಹಾಗೂ ಸಿಬ್ಬಂದಿ ಮಹಾಂತೇಶ್, ಪ್ರಶಾಂತ್ ಕೆ., ವಿಶ್ವನಾಥ, ಶಶಿಕುಮಾರ್, ನಾಗರಾಜ, ಗೋವಿಂದ ಆಚಾರಿ ರಾಘವೇಂದ್ರ, ಅಶೋಕ ಅವರ ತಂಡ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ಆ. 1ರಂದು ವಶಕ್ಕೆ ಪಡೆದು ಆತನಿಂದ 33 ಪವನ್ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
You must be logged in to post a comment Login