LATEST NEWS
ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆಗೆ ಅವಮಾನ ಮಾಡಿದ ಕರಾವೇ ಮುಖಂಡ
ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆಗೆ ಅವಮಾನ ಮಾಡಿದ ಕರಾವೇ ಮುಖಂಡ
ಮಂಗಳೂರು ಜನವರಿ 23: ಕನ್ನಡ ರಕ್ಷಣಾ ವೇದಿಕೆಯ ಮುಖಂಡನೊಬ್ಬ ತುಳು ಭಾಷೆಯ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನ ಮಾಡಿದ ಘಟನೆ ನಡೆದಿದ್ದು, ಕರಾವೇ ಮುಖಂಡನ ವಿರುದ್ದ ಈಗ ಬಾರಿ ಆಕ್ರೋಶ ವ್ಯಕ್ತವಾಗಿದೆ. ಆತನ ವಿರುದ್ದ ಪೊಲೀಸರಿಗೆ ದೂರು ನೀಡಲು ಕೊಡವರು ಮತ್ತು ತುಳು ಸಂಘನೆಗಳು ಮುಂದಾಗಿವೆ.
ಬೆಂಗಳೂರಿನಲ್ಲಿರುವ ಕನ್ನಡ ಸಂಘಟನೆಯೊಂದರ ನಗರ ಸಂಘಟನಾ ಕಾರ‍್ಯದರ್ಶಿ ಎಂದು ಹೇಳಿಕೊಂಡ ಜಾನ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆ ಬಗ್ಗೆ ಅವಹೇಳನ ಮಾಡಿದ್ದಲ್ಲದೆ, ಕೀಳು ಭಾಷೆಯಲ್ಲಿ ಮಾತನಾಡಿದ್ದಾನೆ.
ಸೋಮವಾರ ಮಧ್ಯಾಹ್ನ ವೇಳೆ ತುಳುನಾಡಿನ ಕೊರಗಜ್ಜ ದೈವದ ಅವಹೇಳನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭ ಜಾನ್ ಎಂಬಾತ ತುಳುನಾಡಿನ ಬಗ್ಗೆ ಕೀಳಾಗಿ ಮಾತನಾಡಲು ಆರಂಭಿಸಿದ್ದಾನೆ. ತನ್ನ ಸಂದೇಶದಲ್ಲಿ ‘ತುಳುವರನ್ನು ಆಂಗ್ಲರು ಭಾರತಕ್ಕೆ ಗೋವಾ ಮುಖಾಂತರ ಬಂದಾಗ ಕರ್ನಾಟಕಕ್ಕೆ ಆಶ್ರಯ ಬೇಡಿ ಓಡಿ ಬಂದ ನರಿಗಳು. ನೀವು ಅಪ್ಪಟ್ಟ ಭಾರತೀಯರಲ್ಲ, ಆಂಗ್ಲರು’ ಎಂದು ಟೀಕಿಸಿದ್ದಾನೆ. ಇದು ಮಾತ್ರವಲ್ಲದೆ ತುಳುವರ ಬಗ್ಗೆ, ಮಹಿಳೆಯರ ಅಶ್ಲೀಲಕರ ಪದ ಬಳಕೆ ಮಾಡಿದ್ದಾನೆ.
ಕನ್ನಡ ರಕ್ಷಣಾ ವೇದಿಕೆ ಸಂಘಟನೆಯ ಮುಖಂಡ ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕೊಡವರು, ತುಳುವರು ಒಟ್ಟಾಗಿ ಖಂಡಿಸಿದ್ದಾರೆ. ತುಳು ಭಾಷೆಯನ್ನು ಅವಾಚ್ಯ ಹಾಗೂ ಅಸಾಂವಿಧಾನಿಕವಾಗಿ ಭಾಷೆಯಲ್ಲಿ ಟೀಕೆ ಮಾಡಲಾಗಿದ್ದು, ಕನ್ನಡ ನೆಲದಲ್ಲಿ ಪರಸ್ಪರ ಒಡಕು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.