Connect with us

DAKSHINA KANNADA

ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಫ್ ಗೆ ಆಯ್ಕೆಯಾದ ಪವನ್ ಕುಮಾರ್ ಗೆ ನೆರವು

ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಫ್ ಗೆ ಆಯ್ಕೆಯಾದ ಪವನ್ ಕುಮಾರ್ ಗೆ ನೆರವು

ಪುತ್ತೂರು ಅಗಸ್ಟ್ 25: ವಿಶ್ವ ಬಿಲ್ಲವರ ಸೇವಾ ಚಾವಡಿ ಮತ್ತು ಕೊಣಾಜೆ ಯುವನ ಟ್ರಸ್ಟ್  ಸಂಸ್ಥೆಯ ವತಿಯಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಪವನ್ ಕುಮಾರ್ ಕೆ. ಎಸ್ ಅವರಿಗೆ ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯಲ್ಲಿ ನೆರವು ಹಸ್ತಾಂತರಿಸಲಾಯಿತು.

ಕಡು ಬಡತನದಲ್ಲಿ ಹುಟ್ಟಿದ ಪವನ್, ಇದೇ ಆಗಸ್ಟ್ 31ರಂದು ಮಲೇಷ್ಯಾದಲ್ಲಿ ನಡೆಯುವ 9ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಗೆ ಆಯ್ಕೆಯಾಗಿರುತ್ತಾನೆ. ಈ ಹಿನ್ನಲೆಯಲ್ಲಿ ಸುರೇಶ್ ಸುವರ್ಣ ಹಾಗೂ ಅನುಸೂಯ ದಂಪತಿ ಸಹಾಯಹಸ್ತವನ್ನು ಚಾಚಿತ್ತು. ಇದಕ್ಕೆ ಸ್ವತಃ ಬಿಲ್ಲವರ ಸೇವಾ ಚಾವಡಿ ಹಾಗೂ ಯುವನ ಟ್ರಸ್ಟ್   ರೂ. 30,000 ವನ್ನು ನೀಡಿ ಪವನ್ ಗೆ ನೆರವಾಗಿದೆ.

ಇದೇ ಆಗಸ್ಟ್ 31  2019 ರಂದು ಮಲೇಷಿಯಾದಲ್ಲಿ ನಡೆಯುವ 9ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ 2019 ( ANSON SPORTS CENTRE / BADMINTON COURT , 36000, Teluk Intan , Perak. Malaysia) ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಣವೂ ಬಂದಿರುತ್ತದೆ.

ಪವನ್ ಈ ಮೊದಲು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಮಿಂಚಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾನೆ. ಇದೀಗ ಬಡ ಕುಟುಂಬದ ಈ ಬಾಲಕನ ಕುಟುಂಬಕ್ಕೆ ಮಲೇಷ್ಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಳುಹಿಸಲು ಅರ್ಥಿಕವಾಗಿ ಕಷ್ಟ ಸಾಧ್ಯ. ಹಾಗಾಗಿ ಎರಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ದಾನಿಗಳ ನೆರವಿನಿಂದ ಒಟ್ಟಾದ 30,000 ರೂ ಗಳನ್ನು ಪವನ್ ಕಲಿಯುತ್ತಿರುವ ಶಾಲೆಯಲ್ಲಿ ಶಿಕ್ಷಕರ ಸಮ್ಮುಖದಲ್ಲಿ ಹಸ್ತಾಂತರ ಮಾಡುವ ಮೂಲಕ ವಿದ್ಯಾರ್ಥಿಗೆ ಶುಭಹಾರೈಸಲಾಯಿತು.

ಈ ಸಂದರ್ಭದಲ್ಲಿ ಯುವನ ಟ್ರಸ್ಟ್ ನ ಸಂಸ್ಥಾಪಕಿ ನಮಿತಾ ಶ್ಯಾಮ್, ವಿಶ್ವ ಬಿಲ್ಲವರ ಸೇವಾ ಚಾವಡಿಯ ಉಪಾಧ್ಯಕ್ಷ ಅಜಿತ್ ಪೂಜಾರಿ ಪಜಿರು, ಗೌರವ ಸಲಹೆಗಾರ ಕುಸುಮಾಕರ್ ಕುಂಪಲ, ಶಾಲಾ ಮುಖ್ಯ ಶಿಕ್ಷಕಿ ಮಾಲತಿ.ಕೆ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ‘ಯುವನ ಟ್ರಸ್ಟ್(ರಿ) ಕೋಣಾಜೆ ಅಧ್ಯಕ್ಷರಾದ  ನಮಿತಾಶ್ಯಾಮ್ ಅವರು..  ವಿದ್ಯಾರ್ಥಿಯು ಕರಾಟೆ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿ ತನ್ನ ಊರಿಗೆ ಹಾಗೂ ತಾನು ಕಲಿತ ಶಾಲೆಗೆ ಹೆಸರನ್ನು ತರಲಿ, ಜೀವನದಲ್ಲಿ ಯಶಸ್ಸನ್ನು ಕಂಡು ಭವಿಷ್ಯದಲ್ಲಿ ತಾನು  ಕಲಿತ ಶಾಲೆಗೆ ತನ್ನಿಂದಾದ ಸೇವೆಯನ್ನು ಮಾಡಲಿ ಎಂದು ವಿದ್ಯಾರ್ಥಿಗೆ ಶುಭ ಹಾರೈಸಿದರು.

ಹಾಗು ವಿಶ್ವ ಬಿಲ್ಲವರ ಸೇವಾ ಚಾವಡಿ(ರಿ) ನ ಗೌರವ ಸಲಹೆಗಾರ ರಾದ ಕುಸುಮಾಕರ ಕುಂಪಲ ರವರು. ವಿದ್ಯಾರ್ಥಿಗಳೇ ಜೀವನದಲ್ಲಿ ಅತೀ ಅಗತ್ಯ ದ ವಿಷಯ ಯಾವುದೆಂದರೆ ಅವಕಾಶ !,ಅವಕಾಶ ಸಿಕ್ಕಿದರೆ ಆಕಾಶವನ್ನೂ ಏರಬಹುದು ಎಂದರೆ ತಪ್ಪಾಗಲಾರದು.
ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದಂತಹ ಉದಾಹರಣೆ ನಮಗೆ ನಮ್ಮೆದುರೇ ಇರುವ ನಿಮ್ಮ ಸಹಪಾಠಿ ಪವನ್ ಕುಮಾರ್ ನಿಮಗೆಲ್ಲರಿಗೂ ಮಾದರಿ ವಿದ್ಯಾರ್ಥಿಯಾಗಿದ್ದಾರೆ. ಹಾಗೂ ಪವನ್ ಕುಮಾರನಿಗೆ ಅಂತರಾಷ್ಟ್ರೀಯ ಮಟ್ಡದಲ್ಲಿ ಯಶಸ್ಸು ದೊರಕಲೆಂಬ ಶುಭಹಾರೈಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *