ನೇತ್ರಾವತಿ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಡಬದ ಯುವಕನ ಶವ ಪತ್ತೆ

ಮಂಗಳೂರು ಅಗಸ್ಟ್ 26: ನೇತ್ರಾವತಿ ಸೇತುವೆ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಡಬ ತಾಲೂಕು ನೂಜಿಬಾಳ್ತಿಲ ನಿವಾಸಿ ಸದಾಶಿವನ ಶವ ಕೊನೆಗೂ ಪತ್ತೆಯಾಗಿದೆ.

ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಸದಾಶಿವನ ಮೃತದೇಹ ಪತ್ತೆಯಾಗಿದೆ. ಕಡಬ ತಾಲೂಕು ನೂಜಿಬಾಳ್ತಿಲ ನಿವಾಸಿಯಾಗಿರುವ 28 ವರ್ಷದ ಸದಾಶಿವ ಮಂಗಳೂರಿನಲ್ಲಿ ಎಲೆಕ್ಟ್ರೀಶನ್ ಆಗಿ ಕೆಲಸ ಮಾಡುತ್ತಿದ್ದ ಆದರೆ ಆಗಸ್ಟ್ 16 ರಂದು ಏಕಾಎಕಿ ಕಾಣೆಯಾಗಿದ್ದ ಸದಾಶಿವನ ಬೈಕ್ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಸದಾಶಿವನ ಮನೆಯವರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ನೇತ್ರಾವತಿ ನದಿಯಲ್ಲೂ ಸ್ಥಳೀಯ ಮೀನುಗಾರರುಸಾಕಷ್ಟು ಹುಡುಕಾಟ ನಡೆಸಿದ್ದರು. ಇದೀಗ ವಾರದ ಬಳಿಕ ಪಣಂಬೂರು ಕಡಲ ಕಿನಾರೆಯಲ್ಲಿ ಸದಾಶಿವನ ಶವ ಪತ್ತೆಯಾಗಿದೆ.

Facebook Comments

comments