LATEST NEWS
ಕಾರ್ಕಳ – ಭೀಕರ ರಸ್ತೆ ಅಪಘಾತಕ್ಕೆ ಸಹೋದರರಿಬ್ಬರ ಬಲಿ

ಉಡುಪಿ ಜುಲೈ 10: ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಸಹೋದರರಿಬ್ಬರು ಸಾವನಪ್ಪಿರುವ ಘಟನೆ ನಂದಳಿಕೆಯ ಮಾವಿನಕಟ್ಟೆಯ ಬಳಿ ನಡೆದಿದೆ.
ಮೃತರನ್ನು ನಂದಳಿಕೆಯ ನಿವಾಸಿಗಳಾದ ಸತೀಶ್ ಕುಲಾಲ್ ಹಾಗೂ ಸಂದೀಪ್ ಕುಲಾಲ್ ಎಂದು ಗುರುತಿಸಲಾಗಿದೆ. ಕಾರ್ಕಳದಿಂದ ಬೆಳ್ಮಣ್ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿರುವ ಸಂದರ್ಭ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಸಂದೀಪ್ ಸ್ಥಳದಲ್ಲೇ ಸಾವನಪ್ಪಿದರೆ ಸತೀಶ್ ಆಸ್ಪತ್ರೆಗೆ ಸಾಗಿಸುವಾಗಿ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
