Connect with us

    LATEST NEWS

    ರಾತ್ರೋರಾತ್ರಿ ಅದೃಷ್ಟ ಖುಲಾಯಿಸಿ ಕೋಟ್ಯಾಧಿಪತಿಯಾದ ಮೀನುಗಾರನ ಅಸಲಿ ಕಥೆ..!

    ಕರಾಚಿ :  ಬಡ ಮೀನುಗಾರನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿ ಆದ ಘಟನೆ ನೆರೆಯ ಪಾಕಿಸ್ತಾನದ ಕರಾಚಿ ಬಳಿಯ ಇಬ್ರಾಹಿಮ್‌ ಹೈದರಿ ಗ್ರಾಮದಲ್ಲಿ ನಡೆದಿದೆ.

    ಹಾಜಿ ಬಲೋಚ್‌ ಎಂಬ ಹೆಸರಿನ ಮೀನುಗಾರನೊಬ್ಬ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದ. ಈ ವೇಳೆ ಆತನಿಗೆ ಅಪರೂಪದ ಮೀನೊಂದು ದೊರಕಿದ್ದು, ಅದು ಆತನ ಅದೃಷ್ಟವನ್ನೇ ಬದಲಾಯಿಸಿದೆ. ಸ್ಥಳೀಯ ಭಾಷೆಯಲ್ಲಿ “ಕಿರ್ ಸೋವಾ” ಎಂದು ಕರೆಯಲ್ಪಡುವ ಆ ಅಪರೂಪದ ಮೀನು ವಿಶೇಷತೆಯನ್ನು ಹೊಂದಿದೆ. ಸಾಮಾನ್ಯವಾಗಿ ಈ ಮೀನು ಮಾರುಕಟ್ಟೆಯಲ್ಲಿ 20 ಲಕ್ಷ ರೂ. ಬೆಲೆಬಾಳುತ್ತದೆ. ಆದರೆ, ಈ ಮೀನು ಹರಾಜಿಗೆ ಹೋಗಿದ್ದು, ಅಲ್ಲಿ ಅದು ಯಾರೂ ಕಂಡು ಕೇಳರಿಯದ ಬೆಲೆಗೆ ಮಾರಾಟವಾಗಿದೆ. ಬರೋಬ್ಬರಿ 7 ಕೋಟಿ ರೂ.ಗಳಿಗೆ ಮಾರಾಟವಾಗುವ ಮೂಲಕ ಈ ಸುದ್ದಿ ಎಲ್ಲರ ಗಮನ ಸೆಳೆದಿದೆ‌.

    ಔಷಧೀಯ ಗುಣಗಳಿರುವ ಈ ಸೋವಾ ಮೀನಿಗೆ ವಿಶ್ವಾದಾದ್ಯಂತ ವ್ಯಾಪಕ ಬೇಡಿಕೆಯಿದೆ. ಒಂದೂವರೆ ಮೀಟರ್‌ ಉದ್ದವಿದ್ದು, 20 ರಿಂದ 40 ಕಿಲೋ ತೂಗುವ ಅಪರೂಪದ ಮೀನು ಇದಾಗಿದ್ದು, ಶಸ್ತ್ರಕ್ರಿಯೆ ಸಂದರ್ಭಗಳಲ್ಲೂ ಇದನ್ನು ಬಳಸಲಾಗುತ್ತದೆ ಎನ್ನುವುದು ವಿಶೇಷ. ಹೀಗೆ ಹಲವು ವಿಶೇಷತೆಯುಳ್ಳ ಈ ಮೀನು ತನ್ನ ಸಂತನಾಭಿವೃದ್ಧಿಯ ಸಂದರ್ಭದಲ್ಲಿ ಮಾತ್ರ ಸಮುದ್ರ ತೀರದತ್ತ ಈಜಿಕೊಂಡು ಆಗಮಿಸುತ್ತದೆ. ಈ ಸಮಯದಲ್ಲೇ ಈ ಪ್ರತಿಷ್ಠಿತ ಸೋವಾ ಮೀನು ಹಾಜಿ ಬಲೋಜ್‌ ಬೀಸಿದ ಬಲೆಯಲ್ಲಿ ಬಿದ್ದಿದ್ದು, ಇದೀಗ ಆತನ ಬದುಕನ್ನೇ ಬದಲಿಸುವ ಮಟ್ಟಿಗೆ ದಾಖಲೆ ಬೆಲೆಯಲ್ಲಿ ಮಾರಾಟವಾಗಿದೆ. ಈ ಮೀನು ಮಾರಾಟದಿಂದ ದೊರಕಿರುವ ಹಣವನ್ನು ತನ್ನ ತಂಡದೊಂದಿಗೆ ಹಂಚಿಕೊಳ್ಳುವುದಾಗಿ ಹಾಜಿ ಬಲೋಚ್‌ ತಿಳಿಸಿದ್ದು, ಆತನ ಸಹವರ್ತಿ ಮೀನುಗಾರರು ಫುಲ್ ಖುಷಿಯಾಗಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *