LATEST NEWS
ಹೊಸ ತಾಲೂಕು ರಚನೆಯಿಂದ ಜನರ ಬಳಿಗೆ ಆಡಳಿತ – ಕಂದಾಯ ಸಚಿವರು
ಹೊಸ ತಾಲೂಕು ರಚನೆಯಿಂದ ಜನರ ಬಳಿಗೆ ಆಡಳಿತ – ಕಂದಾಯ ಸಚಿವರು
ಉಡುಪಿ ಫೆಬ್ರವರಿ 14:ಹೊಸ ತಾಲೂಕು ರಚನೆಗೊಂಡಿದ್ದು, ಅಗತ್ಯ ಮೂಲಸೌಕರ್ಯಗಳೆಲ್ಲವನ್ನೂ ಒದಗಿಸುವ ಭರವಸೆಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೀಡಿದರು.
ಅವರಿಂದು ಕಾಪು ತಾಲೂಕು ರಚನೆ ಕಾರ್ಯಕ್ರಮ ಉದ್ಘಾಟಿಸಿ, ಉಳುವವನು ಹೊಲದೊಡೆಯನಾಗಲು ರಾಮ್ ಮನೋಹರ್ ಲೋಹಿಯಾ ಅವರ ಹೋರಾಟದಿಂದ ಪ್ರೇರೇಪಿತನಾಗಿ ಆರಂಭಿಸಿದ ಹೋರಾಟ ವಾಸಿಸುವವನೆ ಮನೆಯೊಡೆಯ ಎಂಬಲ್ಲಿಗೆ ಬಂದು ನಿಂತಿದೆ ಎಂಬುದನ್ನು ಸ್ಮರಿಸಿದರು.
ಕಂದಾಯ ಗ್ರಾಮಗಳು, ತಾಲೂಕುಗಳು ಜನಪರ ಆಡಳಿತಕ್ಕೆ ಸಾಕ್ಷಿಯಾಗಿದ್ದು, ಮಹಿಳಾಪರ ಯೋಜನೆಗಳಿಂದ ಗ್ರಾಮಗಳು ಅಭಿವೃದ್ಧಿಗೊಂಡಿವೆ ಎಂಬುದನ್ನು ವಿವರಿಸಿದರು. ಬಗರ್ ಹುಕುಂ ಬೈಠಕ್‍ಗಳಿಂದ ಬಡವರಿಗೆ ಅನುಕೂಲವಾಗಿದೆ. ಬಡವರಿಗೆ ವಸತಿ ಒದಗಿಸಲು ಇನ್ನಷ್ಟು ಕಾನೂನು ಸರಳೀಕರಣಕ್ಕೆ ತಾನು ಸಿದ್ಧ ಎಂಬುದನ್ನು ಸಚಿವರು ಸ್ಪಷ್ಟಪಡಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಮಾಜಿ ಸಚಿವರು ಹಾಗೂ ಕಾಪು ಶಾಸಕರಾದ ವಿನಯ ಕುಮಾರ್ ಸೊರಕೆ ಅವರು ಕಾಪು ತಾಲೂಕು ರಚನೆಗೆ ಸಂಬಂಧಿಸಿದ ಹೋರಾಟಗಳು ಹಾಗೂ ಹಾದಿಯನ್ನು ಸ್ಮರಿಸಿದರು. ಪುರಸಭೆಯು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯನಿರ್ವಹಿಸುತ್ತಿದ್ದು, ತನ್ನ ಉತ್ತಮ ಕೆಲಸಗಳಿಂದ ರಾಜ್ಯದಲ್ಲೇ ಗುರುತಿಸಲ್ಪಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವರನ್ನು ಸನ್ಮಾನಿಸಲಾಯಿತು. ಅರ್ಹರಿಗೆ ವಿವಿಧ ಸರ್ಕಾರಿ ಸವಲತ್ತುಗಳನ್ನು ವಿತರಿಸಲಾಯಿತು.