Connect with us

    LATEST NEWS

    ಕಾಪು – ಊಟ ಮಾಡಿ ಮನೆಯಿಂದ ಹೊರಗೆ ಬಂದ ಯುವತಿ ಶಶಿಕಲಾ ನಾಪತ್ತೆ…!!

    ಉಡುಪಿ ಅಕ್ಟೋಬರ್ 26: ರಾತ್ರಿ ಮನೆಯಲ್ಲಿ ಊಟ ಮಾಡುತ್ತಿರುವ ಸಂದರ್ಭ ಊಟ ಮಾಡಿ ಮನೆಯಿಂದ ಹೊರಗೆ ಬಂದ ಯುವತಿ ದಿಢೀರ್ ನಾಪತ್ತೆಯಾದ ಘಟನೆ ಘಟನೆ ಕಟಪಾಡಿ ಮೂಡಬೆಟ್ಟು ಗ್ರಾಮದ ಅಚ್ಚಡದಲ್ಲಿ ಅಕ್ಟೋಬರ್ . 24ರ ರಾತ್ರಿ ನಡೆದಿದೆ.


    ಉಡುಪಿ ಕಾಲೇಜೊಂದರಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಅಚ್ಚಡ ನಿವಾಸಿ ಶಶಿಕಲಾ (19) ನಾಪತ್ತೆಯಾಗಿರುವ ಯುವತಿ. ಗುರುವಾರ ರಾತ್ರಿ ತಾಯಿಯೊಂದಿಗೆ ಊಟ ಮಾಡುತ್ತಿದ್ದ ಆಕೆ ಊಟ ಮಾಡುತ್ತಿದ್ದಾಗಲೇ ಹೊರಗೆ ಬಂದಿದ್ದು, ಅಲ್ಲಿಂದಲೇ ದಿಢೀರ್ ನಾಪತ್ತೆಯಾಗಿದ್ದಾಳೆ. ಬಳಿಕ ತಾಯಿ ಮನೆ ಪಕ್ಕದಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದ್ದಾರೆ. ನಂತರ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply