Connect with us

BELTHANGADI

ವಸತಿ ನಿಲಯ ವಿದ್ಯಾಸಂಸ್ಥೆಯನ್ನು ಒಂದುವರ್ಷದ ಅವಧಿಗೆ ಸ್ಥಗಿತಗೊಳಿಸಲಾಗುವುದು : ಕನ್ಯಾಡಿ ಶ್ರೀ

ಬೆಳ್ತಂಗಡಿ : ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲಮಾದ್ಯಮ ವಿದ್ಯಾಲಯ ದೇವರಗುಡ್ಡೆ ಇಲ್ಲಿ ಎಲ್‌ಕೆಜಿ, ಯುಕೆಜಿಯಿಂದ ಎಸ್‌ಎಸ್‌ಎಲ್‌ಸಿಯವರೆಗೆ ವಸತಿ ನಿಲಯದೊಂದಿಗೆ ರಾಜ್ಯಪಠ್ಯಕ್ರಮದ ಆಂಗ್ಲಮಾದ್ಯಮದ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದು ವಿದ್ಯಾರ್ಥಿನಿಲಯದಲ್ಲಿ ಸುಮಾರು 200ಕ್ಕೂ ಅಧಿಕ 12ವರ್ಷದ ಒಳಗಿನ ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಶಿಕ್ಷಣ ಪಡೆದುಕೊಳ್ಳುತ್ತಿದ್ದರು.

ಜಾತಿ, ಧರ್ಮ ಬೇದ ಮರೆತು ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದ್ದು ಇದೀಗ ಕೋವಿಡ್-19 ಎಂಬ ಮಹಾಮಾರಿ ಕಾಯಿಲೆಯಿಂದ ಶಿಕ್ಷಣದ ವ್ಯವಸ್ಥೆಯಲ್ಲಿ ಪೋಷಕರ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಭಿಪ್ರಾಯಗಳನ್ನು ಸರಕಾರವು ಚಿಂತಿಸುತ್ತಿದ್ದು ಸರಕಾರದ ನಿರ್ಣಯಕ್ಕೆ ಕೈಜೋಡಿಸಿ ನಮ್ಮಲ್ಲಿಯೂ 12ವರ್ಷದೊಳಗಿನ ಮಕ್ಕಳು ಇರುವುದರಿಂದ ಮಕ್ಕಳ ಆರೋಗ್ಯ ದೃಷ್ಠಿಯಿಂದ ಹಾಗೂ ಅವರ ಶಿಕ್ಷಣದ ಭವಿಷ್ಯದ ದೃಷ್ಠಿಯಿಂದ ಈಗ ಇರುವ ಮಕ್ಕಳ ಪೋಷಕರ ಅಭಿಪ್ರಾಯವನ್ನು ಸಂಗ್ರಹಿಸಿ ಒಂದು ವರ್ಷದ ಅವಧಿಗೆ ಶಿಕ್ಷಣ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಚಿಂತಿಸಿದ್ದು ಈ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಸಚಿವರಿಗೆ, ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದು ಮುಂದೆ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಮುಂದುವರಿಸುವ ತೀರ್ಮಾನ ಬಂದರೆ ಮಕ್ಕಳು ಇಲ್ಲಿ ಸೇರ್ಪಡೆಯಾಗುತ್ತಾರೆ ಮತ್ತು ಯಾವ ಶಾಲೆಯಲ್ಲಿ ಸೇರ್ಪಡೆಗೊಳಿಸಲಾಗುವುದು ಎಂಬ ಮಾಹಿತಿ ಬಂದರೆ ಅವರಿಗೆ ಪೋಷಕರ ಸಮ್ಮುಖದಲ್ಲಿ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡಲಾಗುವುದು.

ಕೊರೊನಾ ಮಹಾಮಾರಿ ಕಾಯಿಲೆ ಸಂಪೂರ್ಣ ನಿಯಂತ್ರವಾದ ಬಳಿಕ ಇದೇ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ನೀಡಲು ಶ್ರೀರಾಮ ಕ್ಷೇತ್ರದಿಂದ ವತಿಯಿಂದ ಚಿಂತಿಸುತ್ತೇನೆ ಎಂದು ಶ್ರೀರಾಮ ಕ್ಷೇತ್ರದ ದೇವರಗುಡ್ಡೆ ಆಶ್ರಮದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *