FILM
ಕಾಂತಾರದಲ್ಲಿ ಮತ್ತೆ ಒಂದಾದ ರಿಷಬ್ ಶೆಟ್ಟಿ ಹಾಗೂ ದಡ್ಡ ಪ್ರವೀಣ್….!!

ಕನ್ನಡ ಚಿತ್ರರಂಗದಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿ ಕಾಂತಾರ ಸಿನೆಮಾ ಇದ್ದು, ಸಿನಿ ರಸಿಕರು ಕಾಂತಾರ ಸಿನೆಮಾದ ರಿಲೀಸ್ ದಿನವನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಸಿನೆಮಾ ಪ್ರಚಾರದಲ್ಲಿ ಚಿತ್ರದ ನಟ ನಿರ್ದೇಶಕ ರಿಷಬ್ ಶೆಟ್ಟಿ ಭಾಗಿಯಾಗುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ‘ಕಾಂತಾರ’ ಸಿನಿಮಾ ನಿರ್ಮಾಣವಾಗಿದೆ. ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಕಿಶೋರ್ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

ಕಾಂತಾರ ಸಿನಿಮಾ ಅದ್ಬುತವಾಗಿ ಮೂಡಿ ಬಂದಿದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದೆ. ಈ ಸಿನೆಮಾದಲ್ಲಿ ಮತ್ತೆ ರಿಷಬ್ ಶೆಟ್ಟಿ ಜೊತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಇದರ ನಟ ರಂಜನ್ ನಟಿಸುತ್ತಿದ್ದಾರೆ. ಸ.ಹಿ.ಪಾ. ಶಾಲೆ ಕಾಸರಗೋಡು ಇದರಲ್ಲಿ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ನಟಿಸಿದ್ದ ರಂಜನ್ ಈ ಬಾರಿ , ರಿಷಬ್ ಶೆಟ್ಟಿ ಜೊತೆಗೆ ನಟನೆ ಮಾಡಿದ್ದಾರೆ. ಕಾಂತಾರ ಸಿನೆಮಾದಲ್ಲಿನ ನಟನೆ, ಚಿತ್ರೀಕರಣ ಸಂದರ್ಭ ನಡೆದ ಸನ್ನಿವೇಶಗಳ ಬಗ್ಗೆ ಮಂಗಳೂರು ಮಿರರ್ ಜೊತೆ ರಂಜನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.