Connect with us

LATEST NEWS

ಹಿಂದಿಯಲ್ಲಿ ಮುಂದುವರೆದ ಕಾಂತಾರ ಅಬ್ಬರ…ಕೆಜಿಎಫ್ ದಾಖಲೆ ಉಡಿಸ್…!!

ಮುಂಬೈ ನವೆಂಬರ್ 02: ಕನ್ನಡದಲ್ಲಿ ನಿರ್ಮಾಣಗೊಂಡು ಹಿಂದಿ ಡಬ್ ಆಗಿರುವ ಕಾಂತಾರ ಸಿನೆಮಾ ಇದೀಗ ಇಡೀ ಬಾಲಿವುಡ್ ಅನ್ನೇ ಆಳುತ್ತಿದೆ. ಬಾಯಿ ಮಾತಿನ ಪ್ರಚಾರದಿಂದಾಗಿ ಸಿನೆಮಾ ದಿನಗಳೆದಂತೆ ಬಾಕ್ಸ್​ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ.


ಹಲವು ಹಿಂದಿ ಸಿನೆಮಾಗಳು ಕಾಂತಾರ ಚಿತ್ರ ರಿಲೀಸ್ ಆದ ಬಳಿಕ ಬಿಡುಗಡೆಯಾಗಿದ್ದರೂ ಕೂಡ ಕಾಂತಾರ ಚಿತ್ರದ ಕಲೆಕ್ಷನ್ ಕಡಿಮೆ ಆಗುವ ಸೂಚನೆಯೇ ಸಿಗುತ್ತಿಲ್ಲ. ಹಿಂದಿಯಲ್ಲಿ ಈ ಸಿನಿಮಾ ತೆರೆಗೆ ಬಂದು 19 ದಿನ ಕಳೆದಿದೆ. ಸಾಮಾನ್ಯ ದಿನವೂ ಈ ಚಿತ್ರ ಅಬ್ಬರದ ಕಲೆಕ್ಷನ್ ಮಾಡುತ್ತಿದೆ. ನಿರ್ಮಾಪಕರ ಜೇಬನ್ನು ಈ ಚಿತ್ರ ತುಂಬಿಸುತ್ತಿದೆ. ಹಿಂದಿಯಲ್ಲಿ ಈ ಚಿತ್ರದ ಗಳಿಕೆ 50 ಕೋಟಿ ರೂಪಾಯಿ ಸಮೀಪಿಸಿದೆ. ಈಗಾಗಲೇ ‘ಕೆಜಿಎಫ್​’ ಚಿತ್ರದ (KGF Movie) ಹಿಂದಿ ಅವತರಣಿಕೆಯ ಗಳಿಕೆಯನ್ನು ಈ ಸಿನಿಮಾ ಮುರಿದಿದ್ದು, ಇನ್ನೂ ಅನೇಕ ಚಿತ್ರಗಳ ಕಲೆಕ್ಷನ್ ಹಿಂದಿಕ್ಕಲು ಈ ಚಿತ್ರ ರೆಡಿ ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *