Connect with us

LATEST NEWS

ಗದ್ದೆಯ ಕಳೆ ತೆಗೆದ ವಿದ್ಯಾರ್ಥಿಗಳೊಂದಿಗೆ ಕಾಂತಾರ ವೀಕ್ಷಿಸಿದ ಶಾಸಕ ರಘುಪತಿ ಭಟ್

ಉಡುಪಿ ಅಕ್ಟೋಬರ್ 23: ಕೇದಾರೋತ್ಥಾನ ಟ್ರಸ್ಟ್ (ರಿ.) ನ ಹಡಿಲು ಕೃಷಿ ಗದ್ದೆಗಳಲ್ಲಿ ಕಳೆ ತೆಗೆದಿದ್ದ ವಿಧ್ಯಾರ್ಥಿಗಳಿಗೆ ಕೊಟ್ಟ ಮಾತನ್ನು ಶಾಸಕ ರಘುಪತಿ ಭಟ್ ಈಡೇರಿಸಿದ್ದು, ವಿದ್ಯಾರ್ಥಿಗಳ ಜೊತೆ ಕಾಂತಾರ ಸಿನೆಮಾವನ್ನು ವೀಕ್ಷಿಸಿ, ಕಾಂತಾರ ಸಿನೆಮಾದ ಕಲಾವಿದರಿಗೆ ಸನ್ಮಾನ ಮಾಡಿದ್ದಾರೆ.


ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಮಣಿಪಾಲದ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಕಾಂತಾರ ಸಿನೆಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು.


ಈ ಸಂದರ್ಭದಲ್ಲಿ ಕಾಂತಾರಾ ಚಲನಚಿತ್ರದಲ್ಲಿ ನಟಿಸಿದ ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರಾದ ಪ್ರಭಾಕರ್ ಬ್ರಹ್ಮಾವರ, ಭಾಸ್ಕರ್ ಮಣಿಪಾಲ, ಸಂದೀಪ್ ಕುಮಾರ್, ಪ್ರಕಾಶ್ ಉಪ್ಪುಂದ, ರಮಾನಂದ ಬಂಗೇರ, ಚಂದ್ರಕಲಾ ಭಟ್, ಮಾನಸಿ ಸುಧೀರ್, ಶ್ರೀಪಾದ್ ಹೆಗ್ಡೆ, ಉದಯ ಹಾಲಂಬಿ, ಶೇಖರ ಹಾಲಂಬಿ ಇವರನ್ನು ಸನ್ಮಾನಿಸಲಾಯಿತು. ಕಲಾವಿದರು ಶಾಸಕ ರಘುಪತಿ ಭಟ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರೊಂದಿಗೆ ಚಲನಚಿತ್ರ ವೀಕ್ಷಿಸಿದರು.


ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಕಳೆದ ಬಾರಿ ಪ್ರಥಮ ಹಂತದಲ್ಲಿ ಕೈಗೊಂಡ ಹಡಿಲು ಭೂಮಿ ಕೃಷಿ ಮಾಡಿದ ಗದ್ದೆಗಳಲ್ಲಿನ ಕಳೆ ತೆಗೆಯುವ ಕಾರ್ಯದಲ್ಲಿ “ಕಾಂತಾರ” ಚಲನಚಿತ್ರದ ನಿರ್ದೇಶಕ, ನಾಯಕ ನಟರಾದಂತಹ ರಿಷಭ್ ಶೆಟ್ಟಿಯವರು ಪಾಲ್ಗೊಂಡು ವಿದ್ಯಾರ್ಥಿಗಳನ್ನು, ಯುವ ಸಮುದಾಯವನ್ನು ಹುರಿದುಂಬಿಸಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *