Connect with us

    LATEST NEWS

    ಕಾರ್ಗಿಲ್ ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ

    ನವದೆಹಲಿ, ಅಕ್ಟೋಬರ್ 24: ಇಂದು ಬೆಳ್ಳಂಬೆಳಗ್ಗೆ ಕಾರ್ಗಿಲ್ ಯುದ್ಧಭೂಮಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಯೋಧರೊಂದಿಗೆ ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ.

    2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಧಾನಿ  ನರೇಂದ್ರ ಮೋದಿ  ಪ್ರತಿ ವರ್ಷದ ದೀಪಾವಳಿ ಆಚರಣೆಗೆ ವಿವಿಧ ಮಿಲಿಟರಿ ಸೌಲಭ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ಇಂದು ಕಾರ್ಗಿಲ್ ಯುದ್ಧಭೂಮಿಗೆ ತೆರಳಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ.

    ಬಳಿಕ ದೀಪಾವಳಿ ಸಂದೇಶ ನೀಡಿರುವ ಮೋದಿ ಅವರು, ದೇಶದ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿ ಹಬ್ಬ ಕಾಂತಿ ಹಾಗೂ ಹೊಳಪಿಗೆ ಸಂಬಂಧಿಸಿದೆ. ಈ ಪವಿತ್ರ ಹಬ್ಬವು ನಮ್ಮ ಜೀವನದಲ್ಲಿ ಸಂತೋಷ ಮತ್ತು ಯೋಗಕ್ಷೇಮದ ಉತ್ಸಾಹ ಹೆಚ್ಚಿಸಲಿ. ನೀವು ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ದೀಪಾವಳಿ ಆಚರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply