LATEST NEWS
ನನ್ನ ಸಿನಿಮಾ ಜೀವನದಲ್ಲಿ ಮೀಟೂ ತರಹದ ಕೆಟ್ಟ ಅನುಭವವಾಗಿಲ್ಲ- ಉಮಾಶ್ರೀ

ನನ್ನ ಸಿನಿಮಾ ಜೀವನದಲ್ಲಿ ಮೀಟೂ ತರಹದ ಕೆಟ್ಟ ಅನುಭವವಾಗಿಲ್ಲ- ಉಮಾಶ್ರೀ
ಉಡುಪಿ ನವೆಂಬರ್ 4: ನನ್ನ ಸಿನಿಮಾ ಜೀವನದಲ್ಲಿ ಇದುವರೆಗೂ ತನಗೆ ಮೀಟೂ ತರಹದ ಯಾವುದೇ ಕೆಟ್ಟ ಅನುಭವವಾಗಿಲ್ಲ ಎಂದು ಹಿರಿಯ ನಟಿ ಉಮಾಶ್ರಿ ಹೇಳಿದ್ದಾರೆ.
ಕುಂಭಾಶಿ ಆನೆಗುಡ್ಡೆ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಈ ರೀತಿಯ ಸೂಕ್ತ ವೇದಿಕೆಗಳು ಇರಲ್ಲಿಲ್ಲ ಆದರೆ ಈಗ ಮಹಿಳೆಯರಿಗೆ ಅವರು ದುಡಿಯುವ ಕ್ಷೇತ್ರ, ಮನೆ ಸೇರಿದಂತೆ ಎಲ್ಲಾದರೂ ಸಮಸ್ಯೆಗಳಾಗಿದ್ದರೆ ದೈಹಿಕ ಕಿರುಕುಳಗಳು ಘಟಿಸಿದ್ದರೆ ಅಂತಹ ಅನುಭವ ವ್ಯಕ್ತಪಡಿಸಲು ಈ ಮೀಟೂ ಅಭಿಯಾನ ಆರಂಭವಾಗಿದೆ ಎಂದರು.

ಇನ್ನೊಬ್ಬರನ್ನು ಅವಮಾನಿಸುವ ಮತ್ತು ತೇಜೋವಧೆ ಮಾಡುವ ಉದ್ದೇಶ ಈ ಅಭಿಯಾನದ್ದಲ್ಲ. ಈ ಅಭಿಯಾನ ದಾರಿ ತಪ್ಪದೆ ಸೂಕ್ತ ರೀತಿಯಲ್ಲಿ ಉಪಯೋಗವಾಗಬೇಕು ಎಂದ ಅವರು, ಅರ್ಜುನ್ ಸರ್ಜಾ ಪ್ರಕರಣ ಸದ್ಯ ನ್ಯಾಯಾಲಯ ಮೆಟ್ಟಿಲೇರಿರುವ ಕಾರಣ ಆ ಬಗ್ಗೆ ತಾನು ಪ್ರತಿಕ್ರಿಯಿಸಲ್ಲ ಎಂದರು.