Connect with us

FILM

ಕಂಗನಾ ರಣಾವತ್ ಗೆ ಕೋವಿಡ್ ಪಾಸಿಟಿವ್!

ಶಿಮ್ಲಾ, ಮೇ08 : ಬಾಲಿವುಡ್ ನಟಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಗಮನ ಸೆಳೆಯುತ್ತಿರುವ ಕಂಗನಾ ರಣಾವುತ್ ಗೆ ಕೋವಿಡ್ ಸೋಂಕು ತಾಗಿರವುದು ದೃಢವಾಗಿದೆ.

ಈ ಬಗ್ಗೆ ಸ್ವತಃ ಕಂಗನಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಬರುತ್ತಿದ್ದಂತೆ ಕೋವಿಡ್ ಪರೀಕ್ಷೆ ಮಾಡಿಕೊಂಡಿದ್ದು, ಪಾಸಿಟಿವ್ ಆಗಿದೆ ಎಂದಿದ್ದಾರೆ. ಕೆಲವು ದಿನಗಳಿಂದ ದಣಿವಾದ ಅನುಭವವಾಗುತ್ತಿತ್ತು, ಕಣ್ಣುಗಳು ಉರಿಯುತ್ತಿತ್ತು. ಹೀಗಾಗಿ ನಾನು ಕೋವಿಡ್ ಪರೀಕ್ಷೆ ನಡೆಸಿದ್ದೆ. ವರದಿ ಪಾಸಿಟಿವ್ ಎಂದ ಬಂದಿದೆ ಎಂದರು.

ನಾನು ಸದ್ಯ ಕ್ಯಾರಂಟೈನ್ ಆಗಿದ್ದೇನೆ. ಈ ಸೋಂಕು ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದ್ದ ಬಗ್ಗೆ ಯಾವುದೇ ಸೂಚನೆಯೂ ಇರಲಿಲ್ಲ. ನಾನಿದನ್ನೂ ಹೊಡೆದುರುಳಿಸುತ್ತೇನೆ ಎಂಬ ನಂಬಿಕೆ ನನಗಿದೆ. ಜನರು ಕೋವಿಡ್ ಸೋಂಕಿಗೆ ಭಯ ಪಡಬಾರದು. ನೀವು ಭಯಪಟ್ಟರೆ ಅದು ನಿಮ್ಮನ್ನು ಮತ್ತಷ್ಟು ಭಯ ಪಡಿಸುತ್ತದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.