Connect with us

LATEST NEWS

ಕಾನ ಬಾಳ ಚತುಷ್ಪಥ ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ತನಿಖೆಗೆ ಡಿವೈಎಫ್ಐ ಒತ್ತಾಯ

ಮಂಗಳೂರು ಅಗಸ್ಟ್ 31 : ಕಾನ ಬಾಳ ಚತುಷ್ಪತ ರಸ್ತೆ ಕಾಮಾಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ರಾಜ್ಯ ಸರಕಾರ ಕೂಡಲೇ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಳಪೆ ಕಾಮಗಾರಿಗೆ ಸಹಕರಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಆಗ್ರಹಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು ಈಗಾಗಲೇ ಚತುಷ್ಪಥ ರಸ್ತೆ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷ ಕಳೆದಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಮೂಲ ನಕ್ಷೆಯಂತೆ ರಸ್ತೆ ನಿರ್ಮಾಣ ಮಾಡದೇ ರಸ್ತೆಯನ್ನು ಅಗಲ ಕಿರಿದಾಗಿ ನಿರ್ಮಿಸಲಾಗುತ್ತಿದ್ದು, ಅದು ಕೂಡ ಕಳಪೆ ಮಟ್ಟದ್ದಾಗಿದೆ ಎಂದು ಆರೋಪಿಸಿದ್ದಾರೆ. ಇಂದು ಕಾನ ಬಾಳ ಚತುಷ್ಪಥ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು ರಸ್ತೆ ಕಾಮಗಾರಿ ಆರಂಭಿಸಿ ವರ್ಷ ದಾಟಿದರೂ ಚತುಷ್ಪಥ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ, ರಸ್ತೆ ನಿರ್ಮಾಣಗೊಂಡಲ್ಲಿ ಚರಂಡಿ ನಿರ್ಮಿಸದೆ ಇರುವುದರಿಂದ ಅಕ್ಕಪಕ್ಕದ ಜನರಿಗೆ ತೊಂದರೆ ಆಗುತ್ತಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡದೆ ರಸ್ತೆ ನಿರ್ಮಿಸುತ್ತಿದ್ದಾರೆ ಇದರಿಂದಾಗಿ ಟ್ರಾನ್ಸ್ಫರ್ಮರ್ ಕಂಬಗಳೇ ಬೀಳುವ ಅಪಾಯದಲ್ಲಿದೆ ಬಿಎಎಸ್ಎಫ್ ಕಂಪೆನಿ ಬಳಿ ಅಗಲೀಕರಣಕ್ಕೆ ಕೆಐಎಡಿಬಿ ಭೂಮಿ ಬಿಟ್ಟು ಕೊಡುತ್ತಿಲ್ಲ ಎಂಬ ಸಬೂಬು ಹೇಳಿ ರಸ್ತೆಯನ್ನು ಕಿರಿದುಗೊಳಿಸಿ ಕೈಗಾರಿಕೆಗಳ ಬೃಹತ್ ಲಾರಿಗಳು ಸಂಚರಿಸುವ ಈ ರಸ್ತೆಯನ್ನು ನಿತ್ಯ ಅಪಘಾತಗಳಿಗೆ ಸರಕಾರವೇ ಆಹ್ವಾನ ನೀಡಿದಂತೆ ಆಗಿದೆ ಎಂದರು ಅಲ್ಲದೆ ಕಾಂಕ್ರಿಟಿಕರಣ ಸಮತಟ್ಟು ಹೊಂದಿಲ್ಲ ಮತ್ತು ಕಾಂಕ್ರೀಟ್ ಹಾಕಿದ ವರ್ಷ ಆಗುವ ಮೊದಲೇ ಸಿಮೆಂಟ್ ಕಿತ್ತು ಹೋಗಿ ಜಲ್ಲಿಗಳು ಮೇಲೆದ್ದು ನಿಂತಿದೆ ಕಳಪೆ ಕಾಮಗಾರಿ ನಡೆಸಿರುವುದು ಕಣ್ಣಿಗೆ ರಾಚುತ್ತಿದೆ ಎಂದು ಆರೋಪಿಸಿದರು.


ಚುನಾವಣೆಯ ಹೊಸ್ತಿಲಲ್ಲಿ ಈ ರಸ್ತೆಗೆ ಶಂಕುಸ್ಥಾಪನೆ ನಡೆಸಿ ಹೋದ ಶಾಸಕರು ರಸ್ತೆ ಕಾಮಗಾರಿಯನ್ನು ಪರಿಶೀಲಿಸದೆ ಕಳಪೆ ಗುಣಮಟ್ಟದ ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿರುವ ಇಮ್ತಿಯಾಝ್ ಅವರು ರಸ್ತೆ ಕಾಮಗಾರಿಯಲ್ಲಿ ದೊಡ್ಡ ರೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದು ಸರಕಾರ ಕೂಡಲೇ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಳಪೆ ಕಾಮಗಾರಿಗೆ ಸಹಕರಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಈ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *