Connect with us

LATEST NEWS

ಮಾಡೆಲಿಂಗ್ ರಂಗಕ್ಕೆ ಕಂಬಳದ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ

ಮಂಗಳೂರು ಡಿಸೆಂಬರ್ 31: ಓಟಗಾರರಾಗಿ ದಾಖಲೆಗಳ ಸಾಧನೆಯಿಂದ ಗಮನ ಸೆಳೆದಿದ್ದ ಮಿಜಾರು ಅಶ್ವತಪುರ ಶ್ರೀನಿವಾಸ ಗೌಡ ಇದೀಗ ಮಾಡೆಲಿಂಗ್ ರಂಗದಲ್ಲೂ ಮಿಂಚಲಾರಂಭಿಸಿದ್ದಾರೆ. ಕರಾವಳಿಯ ಹಸಿರು ನಿಸರ್ಗದ ಹಿನ್ನೆಲೆಯಲ್ಲಿ ಓಟದ ಕೋಣದ ಜತೆ ಅಭರಣಗಳ ಅಲಂಕಾರದೊಂದಿಗೆ ನಗುಮೊಗದೊಂದಿಗೆ ನಿಂತ ಶ್ರೀನಿವಾಸ ಗೌಡ ಅವರ ದೊಡ್ಡ ಪ್ಲೆಕ್ಸ್ ಗಳು ಕರಾವಳಿಯಲ್ಲಿ ಕಾಣಿಸುತ್ತಿದೆ.


ಕೈಬೆರಳುಗಳ ತುಂಬಾ ವೈವಿಧ್ಯಮಯ ಉಂಗುರಗಳು, ಕೈಗೊಂದು ಕಡಗ, ಬ್ರಾಸ್ ಲೈಟ್, ಪೆಂಡೆಂಟ್ ಸಹಿತ ಚಿನ್ನದ ಹಾರ ಹೀಗೆ ಪುರುಷರೂ ಸ್ವರ್ಣಾಲಂಕಾರ ಹೇಗೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಮಾದರಿಯಾಗಿ ನಿಂತ ಶ್ರೀನಿವಾಸ ಗೌಡ ಅವರು ಹೂನಗೆ ಚೆಲ್ಲಿದ್ದಾರೆ. ಜತೆಗಿರುವ ಕಂಬಳದ ಕೋಣ ‘ಅಪ್ಪು’ ಮಿಜಾರು ಪ್ರಸಾದ್ ನಿಲಯದ ಶಕ್ತಿ ಪ್ರಸಾದ್ ಶೆಟ್ಟಿಯವರದ್ದಾಗಿದ್ದು, ಈಗಾಗಲೇ ಹಲವು ಪದಕಗಳನ್ನು ಗೆದ್ದಿದೆ!.

ಜಾಹೀರಾತುಗಳಲ್ಲಿಯೂ ಕರಾವಳಿಯ ಪ್ರತಿಭೆಗಳನ್ನು, ಇಲ್ಲಿನ ಸೊಬಗು. ವೈಭವವನ್ನು ಎಲ್ಲೆಡೆ ಪರಿಚಯಿಸಬೇಕೆಂಬ ಉತ್ಸಾಹದಿಂದ ಹೊಸಪ್ರಯೋಗಕ್ಕೆ ಇಳಿದಿದ್ದೇವೆ. ಉಡುಪಿಯ ನೇಯ್ಯ ಶಂಕರಪುರ ಮಲ್ಲಿಗೆ, ಅಡಕೆ ಕೃಷಿಯ ರೈತ ಹೀಗೆ ಹತ್ತು ಹಲವು ಪರಿಕಲ್ಪನೆಗಳನ್ನು ಪರಿಚಯಿಸಿದ್ದೇವೆ. ಕರಾವಳಿಯ ಸಾಧಕಿ ಸಿನಿ ಶೆಟ್ಟಿಯನ್ನೂ ಬಳಸಿಕೊಳ್ಳುತ್ತಿದ್ದೇವೆ. ಕರಾವಳಿಯ ಸಾಂಸ್ಕೃತಿಕ ವೈಭವ, ಪ್ರಾಕೃತಿಕ ಸೊಬಗು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದನ್ನೂ ತೋರಿಸಿಕೊಡಬೇಕಿದೆ ಎಂದು ಆಭರಣದ ಮಹೇಶ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *