Connect with us

LATEST NEWS

ಒಂಬತ್ತು ವರ್ಷದ ಬಾಲಕನ ಕಂಬಳ ಓಟ….!!

ಕಾರ್ಕಳ : ತುಳುನಾಡಿನಲ್ಲಿ ಕಂಬಳ ಓಟಗಾರರ ಭರ್ಜರಿ ತಾಲೀಮು ನಡಿತಾ ಇದೆ. ಇಂದಿನಿಂಜ ಕರಾವಳಿಯಲ್ಲಿ ಅಧಿಕೃತವಾಗಿ ಕಂಬಳ ಆರಂಭವಾಗಲಿದೆ. ಕಂಬಳಕ್ಕೆ ಕ್ಷಣ ಗಣನೆ ಆರಂಭವಾಗುತ್ತಿದ್ದಂತೆ ಅತ್ತ ಒಂಬತ್ತು ವರ್ಷದ ಪುಟ್ಟ ಬಾಲಕನೊಬ್ಬ ಕೋಣದ ಬಾಲ ಹಿಡಿದು ಕಂಬಳ ಓಟದ ಪ್ರಾಕ್ಟೀಸ್ ಮಾಡ್ತ ಇರುವ ದೃಶ್ಯವೋಂದು ಈಗ ಎಲ್ಲೆಡೆ ವೈರಲ್ ಆಗ್ತಾ ಇದೆ.  ಮಂಜಲ್‌ಬೆಟ್ಟು ಸುಹಾಸ್ ಪ್ರಭು ಅಮೃತಾ ದಂಪತಿ ಪುತ್ರ ಅತಿಶ್ ಪ್ರಭು ಕಂಬಳ ಕೋಣವೊಂದರ ಜೊತೆ ಓಟದ ಮೂಲಕ ಈಗ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದು, ಮುಂದೆ ಕಂಬಳ ಓಟಗಾರನಾಗಬೇಕೆಂಬ ಕನಸು ಕಾಣುತ್ತಿದ್ದಾನೆ.


ಕಾರ್ಕಳ ಎಸ್‌ವಿಟಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿರುವ ಅತಿಶ್‌ಗೆ ತುಳುನಾಡ ಜನಪದ ಕ್ರೀಡೆ ಕಂಬಳದಲ್ಲಿ ಬಹಳ ಆಸಕ್ತಿ. ಕಂಬಳದ ಪ್ರಸಿದ್ಧ ಓಟಗಾರ ಶ್ರೀನಿವಾಸ್ ಗೌಡ ಅವರಂತೆ ತಾನು ಓಟಗಾರನಾಗಬೇಕು ಎಂಬುದು ಗುರಿ. ಅದಕ್ಕಾಗಿ ವಿವಿಧ ಸ್ತರಗಳಲ್ಲಿ ಅಭ್ಯಾಸ ನಡೆಸುತ್ತಿದ್ದಾನೆ. ಮಗನ ಆಸಕ್ತಿಗೆ ಹೆತ್ತವರ ಬೆಂಬಲವೂ ಇದೆ.


ಮನೆಯಲ್ಲಿ ಕಂಬಳ ಕೋಣಗಳಿದ್ದು, ಅವುಗಳನ್ನು ತೊಳೆಯಲು ಹೋಗುವಾಗ- ವಾಪಸ್ ತರುವಾಗ ಬಾಲ ಹಿಡಿದು ಓಡುತ್ತಾನೆ. ಕಂಬಳದ ಓಟಗಾರರು ಧರಿಸುವ ಸಮವಸ್ತ್ರದಂತಹ ಬಟ್ಟೆ ತಾನೂ ಧರಿಸಿ ಖುಷಿಪಡುತ್ತಾನೆ. ಬಾಲಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಯಾರದ್ರು ಕಂಬಳ ಓಟದಲ್ಲಿ ಆಸಕ್ತಿ ಹೇಗೆ ಅಂತ ಈತನ ಬಳಿ ಕೇಳಿದ್ರೆ ಕಂಬಳ ಓಟದಲ್ಲಿ ಸಾಧನೆ ಮಾಡಿದ ಓಟಗಾರ ಹುಸೈನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡನೇ ರೋಲ್ ಮಾಡೆಲ್ ಅಂತ ಹೇಳುತ್ತಾನೆ ಈ ಪುಟ್ಟ ಪೋರ. ಯುವ ಪೀಳಿಗೆ ಕಂಬಳ ಕ್ಷೇತ್ರದಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ ಅನ್ನುವ ಮಾತು ಕೇಳಿ ಬರುತ್ತಿರುವ ಈ ಕಾಲಘಟ್ಟದಲ್ಲಿ ಬಾಲಕ ಅತಿಷ್ ಸಾಧನೆಗೆ ಹಿರಿಯರು ಹರ್ಷ ವ್ಯಕ್ತಪಡಿಸಿದ್ದು ಉಲ್ವಲ ಭವಿಷ್ಯವನ್ನೂ ಹಾರೈಸಿದ್ದಾರೆ,

Share Information
Continue Reading
Advertisement
Click to comment

Leave a Reply

Your email address will not be published. Required fields are marked *